ಹೈದರಾಬಾದ್: ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷವಾಗಿ ಹಣದ ವಿಚಾರದಲ್ಲಿ ಶಿಸ್ತು ಇರಬೇಕು. ಇಲ್ಲವಾದಲ್ಲಿ ಸಾಲದ ಸುಳಿಯಲ್ಲಿ ಸಿಲುಕುವಿರಿ. ನಿಮ್ಮ ಖರ್ಚುಗಳು ನಿಮ್ಮ ಆದಾಯ ಮೀರಿದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಹಣದ ವಿಚಾರದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಮತ್ತು ಸಾಲದಿಂದ ಹೊರಬರುವುದು ಮುಖ್ಯ. ಹೆಚ್ಚು ಸಮಸ್ಯೆಯಿಲ್ಲದೇ ಸಾಲವನ್ನು ಹೇಗೆ ಕಡಿತಗೊಳಿಸುವುದು ಎಂದು ತಿಳಿಯೋಣ.
ಒಮ್ಮೆ ನಮ್ಮ ಖರ್ಚುಗಳು ಆದಾಯಕ್ಕಿಂತ ಹೆಚ್ಚಾದರೆ, ನಾವು ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿಗೆ ಹೋಗುತ್ತೇವೆ. ಮಾಡಿದ್ದ ಸಾಲ ಮರುಪಾವತಿಯಾಗುವ ಮುನ್ನವೇ.. ಮತ್ತೊಂದು ಸಾಲ ಪಡೆಯುತ್ತಲೇ ಇರುತ್ತೇವೆ. ಕೆಲವೇ ವರ್ಷಗಳಲ್ಲಿ ಇದು ಭರಿಸಲಾಗದ ಹೊರೆಯಾಗಿ ಪರಿಣಮಿಸುತ್ತದೆ. ಹಲವು ವರ್ಷಗಳಿಂದ ಕಷ್ಟಪಟ್ಟು ನಿರ್ಮಿಸಿದ ಕ್ರೆಡಿಟ್ ಇತಿಹಾಸದ ವರದಿ ಹಾನಿಗೊಳಗಾಗುತ್ತದೆ. ಆದ್ದರಿಂದ ಈ ಸಾಲದ ಹೊರೆಯಿಂದ ಹೊರಬರುವ ಮಾರ್ಗಗಳನ್ನು ಶಿಸ್ತಿನಿಂದ ತಿಳಿದುಕೊಳ್ಳುವುದು ಒಳ್ಳೆಯದು.
ಸರಿಯಾದ ಸಮಯಕ್ಕೆ ಸಾಲದ ಕಂತುಗಳನ್ನು ಕಟ್ಟದಿದ್ದರೆ ಸಂಕಷ್ಟ
ನಾವು ಋಣಭಾರ ತೀರಿಸಲು ಒಂದು ಮಾರ್ಗವಿದೆ ಎಂದು ಆಶಿಸುವ ಸಕಾರಾತ್ಮಕ ದೃಷ್ಟಿಕೋನ ಮತ್ತು ಮನೋಭಾವ ಹೊಂದಿರಬೇಕು. ಅಂತೆಯೇ, ಸಾಲ ಮರುಪಾವತಿ ಮಾಡುವುದು ನೈತಿಕ ಮತ್ತು ಕಾನೂನು ಜವಾಬ್ದಾರಿಯಾಗಿದೆ. ಇಲ್ಲದಿದ್ದರೆ ನೀವು ಪಾವತಿ ವಿಳಂಬ ಮಾಡಿದರೆ ಅಥವಾ ವಂಚನೆಗೆ ಪ್ರಯತ್ನಿಸಿದರೆ ನಿಮ್ಮ CIBIL (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್) ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ವೈಯಕ್ತಿಕ ವೃತ್ತಿಪರತೆ ಅವಶ್ಯಕ
ಇದು ಮುಂದಿನ ಸಾಲ ಪಡೆಯಲು ಕಷ್ಟವಾಗುತ್ತದೆ. ನೀವು ಸಾಲ ಮಂಜೂರು ಮಾಡಿದ್ದರೆ ಹೆಚ್ಚಿನ ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ, ಎಲ್ಲ ಸಾಲಗಳನ್ನು ಪಾವತಿಸಲು ಸಿದ್ಧರಾಗಿರಿ. ಅಗತ್ಯವಿದ್ದರೆ, ವೈಯಕ್ತಿಕ ಹಣಕಾಸು ವೃತ್ತಿಪರರನ್ನು ಸಂಪರ್ಕಿಸಿ ಮತ್ತು ಅವರ ಸಲಹೆಯನ್ನು ಪಡೆಯಿರಿ.
ಓದಿ:1.80 ಲಕ್ಷ ಸನಿಹಕ್ಕೆ ಬಂದ ಕೊರೊನಾ ಪ್ರಕರಣಗಳು.. ದೇಶದಲ್ಲಿ ಕೋವಿಡ್ ಆತಂಕ!
ಕೆಲವೊಮ್ಮೆ ವ್ಯಕ್ತಿಯ ಕೆಲವು ನಿರ್ಧಾರಗಳು ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಅದು ಬಿಟ್ಟರೆ.. ಕೆಲವರಿಗೆ ಕೈ ಹಾಕಿದ ಎಲ್ಲವನ್ನೂ ಖರೀದಿಸುವ ಅಭ್ಯಾಸ ಇರುತ್ತದೆ ಮತ್ತು ಅದು ನಿಮ್ಮನ್ನು ಸಾಲದ ಬಲೆಗೆ ತಳ್ಳುತ್ತದೆ. ಕಾರಣ ಏನೇ ಇರಲಿ. ಸಾಲಗಳು ಹೆಚ್ಚಾಗುತ್ತಿದ್ದರೆ ಅವುಗಳನ್ನು ಬಿಗಿಗೊಳಿಸಲು ಪ್ರಯತ್ನಿಸಿ ಆದರೆ ಚಿಂತಿಸಬಾರದು.