ಕರ್ನಾಟಕ

karnataka

ETV Bharat / business

ನೀವು ನಡೆಸುತ್ತಿರುವುದು ಸರ್ಕಸ್ಸೋ​ ಅಥವಾ ಸರ್ಕಾರವನ್ನೋ? ನಿರ್ಮಲಾಗೆ ಸುರ್ಜೇವಾಲಾ ಪ್ರಶ್ನೆ

ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು 2020-2021ರ ಕೊನೆಯ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ದರಗಳಲ್ಲೇ ಮುಂದುವರಿಯಲಿವೆ. ಅಂದರೆ, ಮಾರ್ಚ್ 2021ರ ಹೊತ್ತಿಗೆ ಇದ್ದ ದರಗಳೇ ಇರಲಿವೆ. ನಿನ್ನೆ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್​ ಮಾಡಿದ್ದರು.

FM
FM

By

Published : Apr 1, 2021, 1:05 PM IST

ನವದೆಹಲಿ:ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಕಡಿತಗೊಳಿಸುವ ಆದೇಶವನ್ನು ಸರ್ಕಾರ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಲಾ ಅವರು ಸೀತಾರಾಮನ್ ವಿರುದ್ಧ ಹರಿಹಾಯ್ದು, ನೀವು ಸರ್ಕಸ್ ಅಥವಾ ಸರ್ಕಾರ ನಡೆಸುತ್ತಿದ್ದೀರೋ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮೇಡಂ ಹಣಕಾಸು ಸಚಿವರೇ, ನೀವು 'ಸರ್ಕಸ್' ಅಥವಾ 'ಸರ್ಕಾರ' ನಡೆಸುತ್ತಿದ್ದೀರಾ? ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುವ ಇಂತಹ ಅನುಮೋದಿತ ಆದೇಶವನ್ನು 'ಮೇಲ್ವಿಚಾರಣೆಯಿಂದ' ಹೊರಡಿಸಿದಾಗ ಆರ್ಥಿಕತೆಯ ಕಾರ್ಯಚಟುವಟಿಕೆ ಹೇಗಿದೆ ಎಂದು ಊಹಿಸಬಹುದು ಎಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.

ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು 2020-2021ರ ಕೊನೆಯ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ದರಗಳಲ್ಲೇ ಮುಂದುವರಿಯಲಿವೆ. ಅಂದರೆ, ಮಾರ್ಚ್ 2021ರ ಹೊತ್ತಿಗೆ ಇದ್ದ ದರಗಳೇ ಇರಲಿವೆ. ನಿನ್ನೆ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್​ ಮಾಡಿದ್ದರು.

ನಿರ್ಮಲಾ ಸೀತಾರಾಮನ್ ಅವರು ನಿಜವಾಗಿಯೂ ಭಾರತ ಸರ್ಕಾರದ ಸಣ್ಣ ಯೋಜನೆಗಳ ಮೇಲಿನ ಬಡ್ಡಿದರಗಳ ಕಡಿತದ ಆದೇಶವನ್ನು ಮೇಲ್ವಿಚಾರಣೆಯಿಂದ ಹೊರಡಿಸಿದ್ದರಾ ಅಥವಾ ಇದು ಚುನಾವಣೆಯ ದೃಷ್ಟಿಯ ಪಶ್ಚಾತ್ತಾಪವಾ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪ್ರಶ್ನಿಸಿದ್ದಾರೆ.

ABOUT THE AUTHOR

...view details