ನವದೆಹಲಿ:ಆ್ಯಪಲ್ ಕಂಪನಿ 2020ರಲ್ಲಿ 57.6 ಮಿಲಿಯನ್ ಐಪ್ಯಾಡ್‌ಗಳನ್ನು ರವಾನಿಸಿದ್ದು, ಜಗತ್ತಿನ ಟ್ಯಾಬ್ಲೆಟ್ಗಳ ಮಾರುಕಟ್ಟೆಯಲ್ಲಿ ಶೇಕಡಾ 30.6ರಷ್ಟು ಪಾಲನ್ನು ಹೊಂದಿದೆ ಎಂದು ಹೊಸ ವರದಿಯೊಂದು ಹೇಳಿದೆ. ಆ್ಯಪಲ್ ನಂತರ ಸ್ಯಾಮ್ಸಂಗ್ 31.2 ಮಿಲಿಯನ್ ಟ್ಯಾಬ್ಲೆಟ್ಗಳನ್ನು ರವಾನೆ ಮಾಡಿ ಎರಡನೇ ಸ್ಥಾನದಲ್ಲಿದೆ.
ಸ್ಟ್ರಾಟಜಿ ಅನಾಲಿಟಿಕ್ಸ್ ಈ ವರದಿಯನ್ನು ನೀಡಿದ್ದು, ವಾಣಿಜ್ಯ ಮತ್ತು ಶೈಕ್ಷಣಿಕ ವಲಯದಲ್ಲಿನ ಬೇಡಿಕೆಯ ಕಾರಣದಿಂದ ಹೆಚ್ಚು ಟ್ಯಾಬ್ಲೆಟ್ಗಳು ಮಾರಾಟವಾಗಿವೆ. ಆ್ಯಪಲ್ ಮತ್ತು ಸ್ಯಾಮ್ಸಂಗ್ ಅತಿ ಹೆಚ್ಚು ಟ್ಯಾಬ್ಲೆಟ್ಗಳನ್ನು ರಫ್ತು ಮಾಡಿವೆ.
ಮೂರನೇ ಸ್ಥಾನದಲ್ಲಿ ಅಮೆಜಾನ್ ಇದ್ದು, ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಇದು ಏಳು ವರ್ಷಗಳಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಕಂಡ ಸಂಸ್ಥೆಯಾಗಿದೆ.