ನವದೆಹಲಿ: ಭಾರತದ ಗಡಿಯಲ್ಲಿ ಚೀನಾದ ಒಳಸಂಚು ಮುನ್ನೆಲೆಗೆ ಬಂದು, ಪೂರ್ವ ಲಡಾಕ್‌ನಲ್ಲಿನ ಉದ್ವಿಗ್ನತೆ ಕಳೆದ ತಿಂಗಳು ಬಗೆಹರಿದ ನಂತರ ಅದೇ ಸಮಯದಲ್ಲಿ ಡ್ರ್ಯಾಗನ್ ನಮ್ಮ ದೇಶದ ವಿದ್ಯುತ್ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಹ್ಯಾಕಿಂಗ್ ಮಾಡಲಾಗಿದೆ ಎಂದು ಇತ್ತೀಚೆಗೆ ತಿಳಿದುಬಂದಿದೆ.
ವ್ಯಾಪಕ ಅಡೆತಡೆಯೊಡ್ಡುವ ಮಾಲ್ವೇರ್ಗಳು ಕನಿಷ್ಠ 12 ಭಾರತೀಯ ಸರ್ಕಾರಿ ಸಂಸ್ಥೆಗಳ ಕಂಪ್ಯೂಟರ್ ನೆಟ್‌ವರ್ಕ್‌ಗಳು, ಅದರಲ್ಲಿ ಮುಖ್ಯವಾಗಿ ವಿದ್ಯುತ್ ಕೇಂದ್ರಗಳು ಮತ್ತು ಪವರ್ ರವಾನೆ ಕೇಂದ್ರಗಳನ್ನು 2020ರ ಮಧ್ಯದಲ್ಲಿ ಚೀನಾ ಪ್ರಾಯೋಜಿತ ಗ್ರೂಪ್ಗಳು ಗುರಿಯಾಗಿರಿಸಿಕೊಂಡಿದ್ದವು ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಇದನ್ನೂ ಓದಿ: ಸ್ಪೆಕ್ಟ್ರಮ್ ಹರಾಜು: ಮೊದಲ ದಿನ 77,164 ಕೋಟಿ ರೂ. ಜೇಬಿಗಿಳಿಸಿಕೊಂಡ ಕೇಂದ್ರ ಸರ್ಕಾರ
ಅಮೆರಿಕ ಮೂಲದ ಅಧ್ಯಯನವು, ಚೀನಾ ಸರ್ಕಾರದ ಬೆಂಬಲಿತ ಹ್ಯಾಕಿಂಗ್ ತಂಡಗಳು ಭಾರತ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳ ಕಂಪ್ಯೂಟರ್ ನೆಟ್‌ವರ್ಕ್ ಮತ್ತು ಲೋಡ್ ರವಾನೆ ಕೇಂದ್ರಗಳನ್ನು ಗುರಿಯಾಗಿಸಿವೆ ಎಂದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈಗೆ ಭಾರೀ ವಿದ್ಯುತ್ ಕಡಿತದ ಹಿಂದೆ ಡ್ರ್ಯಾಗನ್ ಕೈಯಿದೆ. ಇದು ಭಾರತಕ್ಕೆ ಎಚ್ಚರಿಕೆ ಅಲ್ಲ ಎಂದು ಹೇಳಿದೆ.
ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯಿಂದ ಕಳೆದ ವರ್ಷ ಜೂನ್‌ನಲ್ಲಿ ಉಭಯ ದೇಶಗಳ ಗಡಿ ವಿವಾದ ಉಲ್ಬಣಗೊಂಡಿತ್ತು. ಮುಂದಿನ ನಾಲ್ಕು ತಿಂಗಳಲ್ಲಿ ಅಂದರೆ, ಅಕ್ಟೋಬರ್ 12ರಂದು ಮುಂಬೈನ ಹೆಚ್ಚಿನ ಭಾಗಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಅನೇಕ ರೈಲುಗಳು ಸ್ಥಗಿತಗೊಂಡಿದ್ದವು. ಉಪನಗರಗಳಲ್ಲಿ 10 ರಿಂದ 12 ಗಂಟೆಗಳ ಕಾಲ ವಿದ್ಯುತ್ ಕಡಿತದಿಂದ ಜನರು ತೀವ್ರವಾಗಿ ಬಾಧಿತರಾದರು. ಅಮೆರಿಕದಲ್ಲಿನ ರೆಕಾರ್ಡ್ ಫ್ಯೂಚರ್ ವಿದ್ಯುತ್ ಕಡಿತದ ಹಿಂದಿನ ಗಡಿ ವಿವಾದ ಸಂಬಂಧ ಅಧ್ಯಯನ ನಡೆಸಿ ಈ ಮಾಹಿತಿ ಬಹಿರಂಗಪಡಿಸಿದೆ.
ಗಡಿ ಉದ್ವಿಗ್ನತೆಯ ಸಮಯದಲ್ಲಿ ಚೀನಾ ಸೈಬರ್ ಹ್ಯಾಕರ್ ತಂಡ ಭಾರತೀಯ ವಿದ್ಯುತ್ ಗ್ರಿಡ್ ಅನ್ನು ಗುರಿಯಾಗಿಸಿತ್ತು. ಚೀನಾ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ರೆಡ್ ಇಕೋ ಗ್ರೂಪ್, ಭಾರತದಲ್ಲಿ ಎನ್‌ಟಿಪಿಸಿ ಸೇರಿದಂತೆ ಐದು ಪ್ರಾಥಮಿಕ ಲೋಡ್ ರವಾನೆ ಕೇಂದ್ರಗಳು ಮತ್ತು ವಿದ್ಯುತ್ ಕಂಪನಿಗಳ ಕಂಪ್ಯೂಟರ್ ನೆಟ್‌ವರ್ಕ್‌ಗಳನ್ನು ಗುರಿಯಾಗಿಸಿಕೊಂಡಿದೆ. ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಕಂಪನಿಗಳಲ್ಲಿ 21 ಐಪಿ ವಿಳಾಸಗಳ ಮೇಲೆ ಹ್ಯಾಕರ್‌ಗಳು ದಾಳಿ ಮಾಡಿದ್ದಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.