ನವದೆಹಲಿ:ದೇಶದಲ್ಲಿ ಕೋವಿಡ್ -19 ಎರಡನೇ ಅಲೆಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿರ್ಣಯಿಸಲು ಮುಂದಿನ ಕೆಲವು ದಿನಗಳವರೆಗೆ ಕಾದು ನೋಡುವ ತಂತ್ರದ ಮೊರೆ ಹೋಗುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ಉದ್ಯಮಕ್ಕೆ ಕರೆ ನೀಡಿದ್ದಾರೆ.
ಮುಂದಿನ ಕೆಲವು ದಿನಗಳ ಮಟ್ಟಿಗೆ ಸ್ವಲ್ಪ ಹೆಚ್ಚು ಜಾಗರೂಕತೆಯಿಂದ ಎದುರು ನೋಡಬೇಕೆಂದು ನಾನು ಉದ್ಯಮವನ್ನು ವಿನಂತಿಸುತ್ತೇನೆ. ನಂತರ ಈ ತ್ರೈಮಾಸಿಕ ಹೇಗಿರಲಿದೆ ಎಂದು ನೀವೇ ನಿರ್ಣಯಿಸಿ ಎಂದು ಹಣಕಾಸು ಸಚಿವರು ಫಿಕ್ಕಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ವರ್ಚುವಲ್ ಭಾಷಣದಲ್ಲಿ ಹೇಳಿದರು.
ಫಿಕ್ಕಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯೊಂದಿಗಿನ ಹಣಕಾಸು ಸಚಿವರ ಸಂವಹನವು ಆಮ್ಲಜನಕ ಮತ್ತು ಔಷಧಿಗಳ ಕೊರತೆಯಿಂದ ಹಿಡಿದು ಕೋವಿಡ್ ಬಿಕ್ಕಟ್ಟು ಮತ್ತು ಆರ್ಥಿಕ ಕ್ಷೇತ್ರಗಳ ಮೇಲೆ ಅದರ ಪ್ರಭಾವದವರೆಗಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.