ಕರ್ನಾಟಕ

karnataka

ETV Bharat / business

ಉದ್ಯೋಗಗಳ ಸೃಷ್ಟಿಗೆ ಏನ್ಮಾಡೋಣ?:'ರೀಥಿಂಕಿಂಗ್ ಇಂಡಿಯಾ ಸೀರಿಸ್' ಬುಕ್​ನಲ್ಲಿದೆ ಉತ್ತರ - ಭಾರತದಲ್ಲಿ ನಿರುದ್ಯೋಗ

ಭಾರತದ ಕೆಲ ಪ್ರಮುಖ ತಜ್ಞರು, ಚಿಂತಕರು ಮತ್ತು ನೀತಿ ನಿರೂಪಕರಾದ ಸಾರ್ತಿ ಆಚಾರ್ಯ, ವಿಜಯ್ ಮಹಾಜನ್ ಮತ್ತು ಮದನ್ ಪಟಕಿ ಅವರು ನಿರುದ್ಯೋಗ ಸಾಂಕ್ರಾಮಿಕದ ವಿವಿಧ ಅಂಶಗಳನ್ನು 14 ಭಾಗಗಳ ಮಹತ್ವಾಕಾಂಕ್ಷೆಯ 'ರೀಥಿಂಕಿಂಗ್ ಇಂಡಿಯಾ ಸೀರಿಸ್​'ನ ಮೂರನೇ ಸಂಪುಟದಲ್ಲಿ ವಿವರಿಸಿದ್ದಾರೆ.

Indian Economy
ಭಾರತದ ಆರ್ಥಿಕತೆ

By

Published : May 1, 2020, 7:35 PM IST

ನವದೆಹಲಿ: ಮಹತ್ವಾಕಾಂಕ್ಷೆಯ ನಗರ ಉದ್ಯೋಗ ಖಾತರಿ ಯೋಜನೆಯೊಂದು ಅನುಷ್ಠಾನಕ್ಕೆ ತರುವುದು ಈ ಸಮಯದಲ್ಲಿ ಅವಶ್ಯಕತೆಯಾಗಿದೆ ಎಂದು ಅರ್ಥಶಾಸ್ತ್ರಜ್ಞರು, ಚಿಂತಕರು ಅಭಿಮತ ವ್ಯಕ್ತಪಡಿಸಿದ್ದಾರೆ.

ನಗರ ಉದ್ಯೋಗ ಖಾತರಿ ಕಾರ್ಯಕ್ರಮ, ದೇಶ ಆರ್ಥಿಕತೆಯ ಚಿತ್ರಣವನ್ನೇ ಪರಿವರ್ತಿಸಬಲ್ಲದು. ಲಕ್ಷಾಂತರ ಭಾರತೀಯರ ಸುಧಾರಿತ ಜೀವನಮಟ್ಟಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಕಡಿಮೆ ನಿರುದ್ಯೋಗ ಮತ್ತು ಅಸಂಪೂರ್ಣೋದ್ಯೋಗದಿಂದ ಉಂಟಾಗುವ ಪರಿಣಾಮ ಹಾಗೂ ಹೆಚ್ಚಿದ ಆದಾಯವು ಸಣ್ಣ ಪಟ್ಟಣಗಳಲ್ಲಿ ಬೇಡಿಕೆಯನ್ನು ವೃದ್ಧಿಸುತ್ತದೆ. ವಿತರಣಾ ಮಾದರಿಯಲ್ಲಿ ಯಶಸ್ವಿ ಉದ್ಯಮಶೀಲತೆಗೆ ಬೇಕಾದಂತಹ ವಾತಾವರಣ ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಸರಕು ಮತ್ತು ಸೇವೆಗಳಲ್ಲಿ ಉತ್ಪಾದಕತೆ ಮತ್ತು ಸುಧಾರಿತ ಜೀವನದ ಗುಣಮಟ್ಟ ವೃದ್ಧಿಸಿ. ಕೌಶಲ್ಯದಿಂದ ಖಾಸಗಿ ವಲಯದಲ್ಲಿ ಹೆಚ್ಚಿದ ಉದ್ಯೋಗ ಮತ್ತು ಉತ್ಪಾದಕತೆಯ ತತ್ಪರಿಣಾಮ, ವೇತನದ ನೆಲೆಯ ಅನೌಪಚಾರಿಕ ವಲಯದ ಆದಾಯ ಬೆಳೆಯುವುದು. ಪರಿಸರ ನಾಶದ ಹಿಮ್ಮುಖದ ಆರ್ಥಿಕತೆಯಂತಹ ಇತರ ಸಲಹೆಗಳನ್ನು ನೀಡಿದ್ದಾರೆ.

ಭಾರತದ ಕೆಲ ಪ್ರಮುಖ ತಜ್ಞರು, ಚಿಂತಕರು ಮತ್ತು ನೀತಿ ನಿರೂಪಕರಾದ ಸಾರ್ತಿ ಆಚಾರ್ಯ, ವಿಜಯ್ ಮಹಾಜನ್ ಮತ್ತು ಮದನ್ ಪಟಕಿ ಅವರು ನಿರುದ್ಯೋಗ ಸಾಂಕ್ರಾಮಿಕದ ವಿವಿಧ ಅಂಶಗಳನ್ನು 14 ಭಾಗಗಳ ಮಹತ್ವಾಕಾಂಕ್ಷೆಯ 'ರೀಥಿಂಕಿಂಗ್ ಇಂಡಿಯಾ ಸೀರಿಸ್​'ನ ಮೂರನೇ ಸಂಪುಟದಲ್ಲಿ ವಿವರಿಸಿದ್ದಾರೆ.

ಸಂತೋಷ್ ಮೆಹ್ರೋತ್ರಾ ಸಂಪಾದಕತ್ವದ ಇತ್ತೀಚಿನ ಸಂಪುಟ "ರಿವೈವಿಂಗ್ ಜಾಬ್ಸ್: ಆನ್ ಅಜೆಂಡಾ ಫಾರ್ ಗ್ರೋತ್" ಅನ್ನು ವಿಶ್ವ ಕಾರ್ಮಿಕ ದಿನದಂದು ಪೆಂಗ್ವಿನ್ ರಾಂಡಮ್ ಹೌಸ್ ಬಿಡುಗಡೆ ಮಾಡಿದೆ.

2012ರಿಂದ ಈಚೆಗೆ ಕಾರ್ಮಿಕ ವಲಯಕ್ಕೆ ಪ್ರವೇಶಿಸುವ ಯುವಕರ ಸಂಖ್ಯೆಯು ವೇಗದಲ್ಲಿ ಹೆಚ್ಚಾಗಿದೆ. ಆದರೆ, ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ ತೀರ ಕಡಿಮೆಯಾಗಿದೆ. ಕಾರ್ಮಿಕ ಬಲವು ಮತ್ತಷ್ಟು ಹೆಚ್ಚಾಗುತ್ತಿದ್ದಂತೆ 2020 ಮತ್ತು 2030ರ ನಡುವೆ ಈ ಪರಿಸ್ಥಿತಿಯು ಗಂಭೀರವಾಗಬಹುದು ಎಂದು ಅದರಲ್ಲಿ ಎಚ್ಚರಿಸಿದ್ದಾರೆ.

"ರಿವೈವಿಂಗ್ ಜಾಬ್ಸ್" ಭಾರತವು ತನ್ನ ಜನಸಂಖ್ಯಾ ಲಾಭಾಂಶದ ಉಳಿದ ಅವಧಿಯನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬುದರ ಕುರಿತು ಸಲಹೆಗಳನ್ನು ನೀಡುತ್ತದೆ. ಯಾವುದೇ ವೈಫಲ್ಯವು ಮುಂಬರುವ ದಶಕಗಳಿಂದ ಲಕ್ಷಾಂತರ ಜನರು ಬಡತನದಿಂದ ಬಳಲುವಂತೆ ಮಾಡುತ್ತದೆ ಎಂಬುದನ್ನು ಅದು ಎಚ್ಚರಿಸಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಾರ್ಮಿಕ ಕೇಂದ್ರದ ಅರ್ಥಶಾಸ್ತ್ರದ ಪ್ರಾಧ್ಯಾಪಕ ಮೆಹ್ರೋತ್ರಾ ಅವರ ಪ್ರಕಾರ, ಭಾರತವು ಉದ್ಯೋಗ ಬಿಕ್ಕಟ್ಟು ಎದುರಿಸುತ್ತಿದೆ. ಬಹು ಸಂಖ್ಯೆಯಲ್ಲಿ ಯುವಕರು ಕೆಲಸ ಹುಡುಕುತ್ತ ಕಾರ್ಮಿಕ ಬಲಕ್ಕೆ ಸೇರುತ್ತಿದ್ದಾರೆ. ಕೆಲಸ ಹುಡುಕುವವರ ಪ್ರಮಾಣವು ಈ ಮೊದಲು ಕಡಿಮೆ ಇತ್ತು ಎಂದಿದ್ದಾರೆ.

ABOUT THE AUTHOR

...view details