ಕರ್ನಾಟಕ

karnataka

By

Published : Jan 16, 2020, 8:12 PM IST

ETV Bharat / business

ಭಾರತದ ಪರೋಪಕಾರಕ್ಕಾಗಿ ಅಮೆಜಾನ್ 7,000 ಕೋಟಿ ರೂ. ಹೂಡಿಕೆ ಮಾಡಿಲ್ಲ: ಗೋಯಲ್​

ಭಾರತ ಪ್ರವಾಸ ಕೈಗೊಂಡಿದ್ದ ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್​ ಬೆಜೊಸ್​ ಅವರು, ನಿನ್ನೆ (ಬುಧವಾರ) ಭಾರತದ ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಲ್ಲಿ 1 ಬಿಲಿಯನ್ ಡಾಲರ್​ (7,000 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು. '1 ಬಿಲಿಯನ್ ಡಾಲರ್​ ಹೂಡಿಕೆ ಮಾಡುವ ಮೂಲಕ ಅಮೆಜಾನ್ ಭಾರತಕ್ಕೆ ಯಾವುದೇ ದೊಡ್ಡ ಪರೋಪಕಾರ ಮಾಡಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್​ ಪ್ರತಿಕ್ರಿಯೆ ನೀಡಿದ್ದಾರೆ.

Goyal
ಗೋಯಲ್

ನವದೆಹಲಿ: ದೇಶದಲ್ಲಿ 1 ಬಿಲಿಯನ್ ಡಾಲರ್​ ಹೂಡಿಕೆ ಮಾಡುವ ಮೂಲಕ ಅಮೆಜಾನ್ ಭಾರತಕ್ಕೆ ಯಾವುದೇ ದೊಡ್ಡ ಪರೋಪಕಾರ ಮಾಡಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್​ ಹೇಳಿದ್ದಾರೆ.

ಭಾರತ ಪ್ರವಾಸ ಕೈಗೊಂಡಿದ್ದ ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್​ ಬೆಜೊಸ್​ ನಿನ್ನೆ (ಬುಧವಾರ) ಭಾರತದ ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಲ್ಲಿ ಒಂದು ಬಿಲಿಯನ್ ಡಾಲರ್​ (7,000 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು. ಈ ಬಗ್ಗೆ ಗೋಯಲ್ ಇವತ್ತು ಪ್ರತಿಕ್ರಿಯೆ ನೀಡಿದ್ದಾರೆ.
ಇ-ಕಾಮರ್ಸ್ ಕಂಪನಿಗಳು ಭಾರತೀಯ ನಿಯಮಗಳನ್ನು ಅಕ್ಷರಶ: ಹಾಗೂ ಉತ್ಸಾಹದಿಂದ ಅನುಸರಿಸಬೇಕು. ತಯಾರಿಕೆಯಲ್ಲಿ ಯಾವುದೇ ಲೋಪದೋಷಗಳನ್ನು ಕಂಡುಹಿಡಿಯಬಾರದು ಎಂದು ಹೇಳಿದರು.

ಅವರು (ಅಮೆಜಾನ್) ಒಂದು ಬಿಲಿಯನ್ ಡಾಲರ್​ನಷ್ಟು ಹೂಡಿಕೆ ಮಾಡಿರಬಹುದು. ಆದರೆ, ಅವರು ಪ್ರತಿವರ್ಷ ಒಂದು ಬಿಲಿಯನ್ ಡಾಲರ್ ನಷ್ಟವನ್ನು ಮಾಡಿದರೆ ಆ ಶತಕೋಟಿ ಡಾಲರ್‌ಗೆ ಹಣಕಾಸು ಒದಗಿಸಬೇಕಾಗುತ್ತದೆ. ಆದರಿಂದ, ಶತಕೋಟಿ ಡಾಲರ್‌ ಹೂಡಿಕೆ ಮಾಡುವಾಗ ಅವರು ಭಾರತದ ಪರವಾಗಿ ಕೆಲಸ ಮಾಡುತ್ತಿರುವಂತೆ ಅಲ್ಲ ಎಂದು ರೈಸಿನಾ ಸಂವಾದದಲ್ಲಿ ಹೇಳಿದರು.

ಅವರು ಕಳೆದ ಕೆಲವು ವರ್ಷಗಳಿಂದ ವೇರ್​ಹೌಸಿಂಗ್​ ಮತ್ತು ಇತರ ಕೆಲವು ಚಟುವಟಿಕೆಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇದು ಸ್ವಾಗತಾರ್ಹ ಮತ್ತು ಒಳ್ಳೆಯದು ಎಂದರು.

ಅಮೆಜಾನ್ ಮತ್ತು ವಾಲ್ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್ ಭಾರತದ ಚಿಲ್ಲರೆ ವ್ಯಾಪಾರಿಗಳಿಂದ ತೀವ್ರವಾದ ಟೀಕೆಗಳನ್ನು ಎದುರಿಸುತ್ತಿದೆ. ಭಾರತೀಯ ಕಾನೂನುಗಳನ್ನು ಉಲ್ಲಂಘಿಸಿ ಸ್ಪರ್ಧಾತ್ಮಕವಲ್ಲದ ಬೆಲೆಗಳನ್ನು ಸರಕುಗಳಿಗೆ ನಿಗದಿಪಡಿಸುತ್ತಿದೆ ಎಂಬ ಆರೋಪವಿದೆ. ಇದನ್ನು ಕಂಪನಿಗಳು ನಿರಾಕರಿಸಿಕೊಂಡು ಬರುತ್ತಿವೆ.

ABOUT THE AUTHOR

...view details