ನವದೆಹಲಿ: ಆನ್ಲೈನ್ ಶಾಪಿಂಗ್ ತಾಣ ಅಮೇಜಾನ್ ತನ್ನ 'ಗ್ರೇಟ್ ಇಂಡಿಯನ್ ಫೆಸ್ಟಿವ್ ಸೇಲ್' ಆರಂಭಿಸಿ ನಾಲ್ಕು ದಿನವಾಗಿದ್ದು, ಈ ಅವಧಿಯಲ್ಲಿ ಭರ್ಜರಿ ವಹಿವಾಟು ನಡೆದಿದೆ ಎಂದು ಅಮೇಜಾನ್ ಹೇಳಿದೆ.
'ಗ್ರೇಟ್ ಇಂಡಿಯನ್ ಫೆಸ್ಟಿವ್ ಸೇಲ್' ಆರಂಭವಾದ 36 ಗಂಟೆಯಲ್ಲಿ ಬರೋಬ್ಬರಿ ₹750 ಕೋಟಿ ವ್ಯವಹಾರ ನಡೆದಿದೆ. ಟಿವಿ ಹಾಗೂ ಮೊಬೈಲ್ಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ.
ಅಮೇಜಾನ್ ಮೂಲಕ ಹಬ್ಬ ಆಚರಿಸಿದ ಒನ್ಪ್ಲಸ್...! ಎರಡೇ ದಿನದಲ್ಲಿ ಕೋಟಿ ಕೋಟಿ ಬಾಚಿದ ಚೀನಾ ಕಂಪನಿ ..
ಆಫರ್ ಘೋಷಣೆಯಾದ ಆರಂಭಿಕ ಗಂಟೆಗಳಲ್ಲೇ ಶೇ.66ರಷ್ಟು ಅಮೇಜಾನ್ ಪ್ರೈಮ್ ಸದಸ್ಯರು ವಿವಿಧ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ವೈರ್ಲ್ಪೂಲ್, ಸ್ಯಾಮ್ಸಂಗ್,ಐಎಫ್ಬಿ ಹಾಗೂ ಎಲ್ಜಿ ಟಿವಿ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಿಗೆ ಡಿಮ್ಯಾಂಡ್ ಹೆಚ್ಚಿದ್ದರೆ, ಅತ್ತ ಒನ್ಪ್ಲಸ್, ಸ್ಯಾಮ್ಸಂಗ್ ಹಾಗೂ ಆ್ಯಪಲ್, ಒಪ್ಪೋ, ಎಮ್ಐ, ವಿವೋ ಮೊಬೈಲ್ ಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ ಎಂದು ಅಮೇಜಾನ್ ಹೇಳಿದೆ.