ಸ್ಯಾನ್ ಫ್ರಾನ್ಸಿಸ್ಕೋ: ಇ-ಕಾಮರ್ಸ್ ಪ್ರಮುಖ ಅಮೆಜಾನ್ ಕಂಪನಿ ಕೋವಿಡ್-19 ಗಾಗಿ ತನ್ನದೇ ಆದ ಪರೀಕ್ಷಾ ಕಿಟ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಟೆಸ್ಟ್ ಕಿಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಡಾಲರ್ 39.99 ಕ್ಕೆ ಮಾರಾಟವಾಗುತ್ತಿದೆ. ಯುಎಸ್‌ನ ಕೆಲವು ಪ್ರದೇಶಗಳಲ್ಲಿ ಪ್ರೈಮ್ ಮೂಲಕ ಒಂದು ದಿನದಲ್ಲಿ ಡೆಲಿವರಿ ಮಾಡಿದೆ ಎಂದು ವರ್ಜ್ ವರದಿ ಮಾಡಿದೆ.
ಅಮೆಜಾನ್ ಕೋವಿಡ್ ಪರೀಕ್ಷಾ ಕಿಟ್ ಇದೀಗ ಆನ್ಲೈನ್ನಲ್ಲೂ ಲಭ್ಯ - ಇ-ಕಾಮರ್ಸ್ ಪ್ರಮುಖ ಅಮೆಜಾನ್ ಕಂಪನಿ
ಅಮೆಜಾನ್ ತನ್ನ ಕೋವಿಡ್ -19 ಟೆಸ್ಟ್ ಕಿಟ್ಗೆ ಯುಎಸ್ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌ನ ಅನುಮೋದನೆಯನ್ನು ಪಡೆದುಕೊಂಡಿದೆ. ಜೀನೋಮಿಕ್ಸ್ ಕಂಪನಿ ಡಿಎಕ್ಸ್‌ಟೆರಿಟಿ ತಯಾರಿಸಿದ ಕೋವಿಡ್ -19 ಪರೀಕ್ಷಾ ಕಿಟ್ ಮತ್ತು ಕ್ವಿಡೆಲ್ ತಯಾರಿಸಿದ 10 ನಿಮಿಷಗಳ ಕ್ಷಿಪ್ರ ಪರೀಕ್ಷಾ ಕಿಟ್ ಅನ್ನು ಅಮೆಜಾನ್ ನೀಡುತ್ತದೆ.
ಒಬ್ಬ ವ್ಯಕ್ತಿಯು ತನ್ನ ಮೂಗಿನಿಂದ ಸ್ವ್ಯಾಬ್ ಕಲೆಕ್ಟ್ ಮಾಡಿ, ಅದನ್ನು ಪ್ರಿಪೇಯ್ಡ್ ಶಿಪ್ಪಿಂಗ್ ರಿಟರ್ನ್ ಲೇಬಲ್ ಹೊಂದಿರುವ ಪೆಟ್ಟಿಗೆಯಲ್ಲಿ ಸಂಗ್ರಹಿಸಿಡಬೇಕು. ನಂತರ ಸ್ವ್ಯಾಬ್‌ಗಳನ್ನು ಕೇಂದ್ರೀಕೃತ ಲ್ಯಾಬ್‌ಗೆ ಕಳುಹಿಸಿಕೊಡಬೇಕು. ಅಥವಾ ಅಲ್ಲಿ ನೀಡಲಾಗಿರುವ ಕ್ಷಿಪ್ರ ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ನಡೆಸಬಹುದು. ಅಮೆಜಾನ್ ತನ್ನ ಕೋವಿಡ್ -19 ಟೆಸ್ಟ್ ಕಿಟ್ಗೆ ಯುಎಸ್ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌ನ ಅನುಮೋದನೆಯನ್ನು ಪಡೆದುಕೊಂಡಿದೆ.
ಜೀನೋಮಿಕ್ಸ್ ಕಂಪನಿ ಡಿಎಕ್ಸ್‌ಟೆರಿಟಿ ತಯಾರಿಸಿದ ಕೋವಿಡ್ -19 ಪರೀಕ್ಷಾ ಕಿಟ್ ಮತ್ತು ಕ್ವಿಡೆಲ್ ತಯಾರಿಸಿದ 10 ನಿಮಿಷಗಳ ಕ್ಷಿಪ್ರ ಪರೀಕ್ಷಾ ಕಿಟ್ ಅನ್ನು ಅಮೆಜಾನ್ ನೀಡುತ್ತದೆ. ಅವರು ಕ್ರಮವಾಗಿ ಡಾಲರ್ 99 ಮತ್ತು ಡಾಲರ್ 24.95 ಕ್ಕೆ ಮಾರಾಟ ಮಾಡುತ್ತಾರೆ.