ಕರ್ನಾಟಕ

karnataka

ETV Bharat / business

ಆನ್​ಲೈನ್ ಗ್ರಾಹಕರಿಗೆ ಖುಷಿ ಸುದ್ದಿ... ಈ ದಿನಾಂಕದಿಂದ ಮತ್ತೆ ಅಮೆಜಾನ್ ಸ್ಪೆಷಲ್ ಸೇಲ್..! - ಅಮೇಜಾನ್​ ಗ್ರೇಟ್ ಇಂಡಿಯನ್ ಸೇಲ್

ಅ.13ರಿಂದ 17ರವರೆಗೆ ಅಮೆಜಾನ್​ ಈ ಬಾರಿ ಗ್ರೇಟ್ ಇಂಡಿಯನ್ ಸೆಲಬ್ರೇಷನ್​ ಸ್ಪೆಷಲ್ ಸೇಲ್ ಹಮ್ಮಿಕೊಂಡಿದ್ದು, ಗ್ರಾಹಕರು ವಿಶೇಷ ಆಫರ್​ಗಳನ್ನು ಪಡೆಯಬಹುದಾಗಿದೆ.

ಅಮೇಜಾನ್

By

Published : Oct 7, 2019, 5:22 PM IST

ನವದೆಹಲಿ:ಅಮೆಜಾನ್​ ಗ್ರೇಟ್ ಇಂಡಿಯನ್ ಸೇಲ್ ಸೆ.29ರಿಂದ ಅ.4ರವರೆಗೆ ನಡೆದಿತ್ತು. ಈ ಅವಧಿಯಲ್ಲಿ ಇಷ್ಟದ ವಸ್ತುವನ್ನು ಖರೀದಿ ಮಾಡುವಲ್ಲಿ ವಿಫಲವಾದವರಿಗೆ ಮತ್ತೊಂದು ಅವಕಾಶ ಇದೆ. ಗ್ರೇಟ್ ಇಂಡಿಯನ್ ಸೇಲ್ ಭರ್ಜರಿ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಅಮೆಜಾನ್ ಸೆಲಬ್ರೇಷನ್​ ಸ್ಪೆಷಲ್ ಸೇಲ್ ಹಮ್ಮಿಕೊಂಡಿದೆ.

ಹೌದು. ಅ.13ರಿಂದ 17ರವರೆಗೆ ಅಮೆಜಾನ್​ ಮತ್ತೊಮ್ಮೆ ಗ್ರೇಟ್ ಇಂಡಿಯನ್ ಸೆಲಬ್ರೇಷನ್​ ಸ್ಪೆಷಲ್​​ ಸೇಲ್ ಹಮ್ಮಿಕೊಂಡಿದ್ದು, ಗ್ರಾಹಕರು ವಿಶೇಷ ಆಫರ್​ಗಳನ್ನು ಪಡೆಯಬಹುದಾಗಿದೆ.

ಅಮೇಜಾನ್ Vs ಫ್ಲಿಪ್​ಕಾರ್ಟ್​ ದರ ಸಮರ.. ಫೆಸ್ಟಿವ್ ಸೇಲ್​ನಲ್ಲಿ ಗೆದ್ದಿದ್ದು ಯಾರು..?

ಅಮೆಜಾನ್ ಪ್ರೈಮ್ ಗ್ರಾಹಕರು ಉಳಿದ ಗ್ರಾಹಕರಿಗಿಂತ ಮುಂಚಿತವಾಗಿ ಅಂದರೆ ಅ.12ರ ಮಧ್ಯಾಹ್ನ 12ರಿಂದ ಆಫರ್​ ಪಡೆಯಬಹುದಾಗಿದೆ. ಅ.13ರಿಂದ ಆರಂಭವಾಗಲಿರುವ ವಿಶೇಷ ಸೇಲ್​ನಲ್ಲಿ ಮೊಬೈಲ್ ಫೋನ್​​ಗಳಿಗೆ ಶೇ.40ರಷ್ಟು ಕಡಿತವಿರಲಿದೆ ಎಂದು ಅಮೆಜಾನ್ ಹೇಳಿದೆ.

ವಿಶೇಷವಾಗಿ ಐಫೋನ್, ಷಿಯೋಮಿ, ಒನ್​ಪ್ಲಸ್, ವಿವೋ ಹಾಗೂ ಹಾನರ್​ ಮೊಬೈಲ್​ಗಳಿಗೆ ಆಫರ್​ ಇರಲಿದೆ. ಟಿವಿ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಿಗೆ ಶೇ.60ರಷ್ಟು ಡಿಸ್ಕೌಂಟ್ ಇರಲಿದೆ.

ABOUT THE AUTHOR

...view details