ನವದೆಹಲಿ:ಇಂದಿನ ಕಾಲದಲ್ಲಿ ಇ-ಕಾಮರ್ಸ್ ಜಗತ್ತಿನಲ್ಲಿ ಅತಿ ದೊಡ್ಡದಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಆನ್‌ಲೈನ್ ಶಾಪಿಂಗ್ ಕ್ಷೇತ್ರದ ದೇಶದ ಎರಡು ದೊಡ್ಡ ವೇದಿಕೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹಬ್ಬದ ದಿನದ ಮಾರಾಟವನ್ನು ಆರಂಭಿಸಲಿವೆ.
ಎರಡು ದೈತ್ಯ ಸಂಸ್ಥೆಗಳ ನಡುವಿನ ಸ್ಪರ್ಧೆಯು ಹಿಂದಿನ ವರ್ಷಗಳಂತೆಯೇ ತೀವ್ರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಇಬ್ಬರೂ ತಮ್ಮ ಹಬ್ಬದ ಮಾರಾಟವನ್ನು ಅಕ್ಟೋಬರ್ 3 ರಿಂದ ಪ್ರಾರಂಭಿಸಲಿದ್ದಾರೆ.
ಫ್ಲಿಪ್‌ಕಾರ್ಟ್ ತನ್ನ 'ಬಿಗ್ ಬಿಲಿಯನ್ ಡೇಸ್' ದಿನಾಂಕವನ್ನು ಬದಲಾಯಿಸಿದೆ. ಇದರ ಪ್ರತಿಸ್ಪರ್ಧಿ ಅಮೆಜಾನ್ ಇಂಡಿಯಾ ಕೂಡ ಇದೇ ರೀತಿಯ ಕ್ರಮವನ್ನು ತನ್ನ ಮಾರಾಟದ ಕಾರ್ಯಕ್ರಮವಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅನ್ನು ಅಕ್ಟೋಬರ್ 3 ರಿಂದ ಆರಂಭಿಸುವುದಾಗಿ ಘೋಷಿಸಿದೆ.
ಫ್ಲಿಪ್‌ಕಾರ್ಟ್‌ನ ದಿ ಬಿಗ್ ಬಿಲಿಯನ್ ಡೇಸ್ (TBBD) ಮಾರಾಟವು ಎಂಟು ದಿನಗಳ ಕಾರ್ಯಕ್ರಮವಾಗಿದ್ದರೆ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಒಂದು ತಿಂಗಳ ಅವಧಿಯ ಕಾಲ ಇರುತ್ತದೆ.
ಸೆಪ್ಟೆಂಬರ್ 23 ರಂದು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ದಿನಾಂಕಗಳನ್ನು ಘೋಷಿಸಿತ್ತು. ಈ ಮಾರಾಟವು ಅಕ್ಟೋಬರ್ 7 ರಿಂದ ಆರಂಭವಾಗಬೇಕಿತ್ತು ಮತ್ತು ಅಕ್ಟೋಬರ್ 12 ರ ವರೆಗೆ ನಡೆಯಬೇಕಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಫ್ಲಿಪ್‌ಕಾರ್ಟ್ ಅಕ್ಟೋಬರ್ 7 ರ ಬದಲಾಗಿ ಅಕ್ಟೋಬರ್ 3 ರಿಂದ 10 ರವರೆಗೆ ಬಿಗ್ ಬಿಲಿಯನ್ ಡೇಸ್ ದಿನಾಂಕ ಘೋಷಿಸಿದೆ.
ಅಕ್ಟೋಬರ್ 3 ರಿಂದ ಆರಂಭವಾಗಲಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ಗೆ ಪ್ರೈಮ್ ಸದಸ್ಯರಿಗೆ ಆರಂಭಿಕ ಪ್ರವೇಶ ಇರುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ. ಪ್ರೈಮ್ ಅರ್ಲಿ ಆಕ್ಸೆಸ್‌ನ ವಿಶೇಷತೆಗಳ ಕುರಿತು ಕಂಪನಿಯು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದೆ.
ಮಂಗಳವಾರ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಈ ವರ್ಷ ಅಕ್ಟೋಬರ್ 7-12 ರಿಂದ ನಡೆಯಲಿದೆ ಎಂದು ಘೋಷಿಸಿದೆ. ಈ ಹಿಂದೆ ಕೂಡ, ಉಭಯ ಕಂಪನಿಗಳು ಹಬ್ಬದ ಸಮಯದಲ್ಲಿ ತಮ್ಮ ಮಾರಾಟದ ಕಾರ್ಯಕ್ರಮಗಳೊಂದಿಗೆ ಪೈಪೋಟಿ ನಡೆಸಿದ್ದವು.
ಅಲ್ಲದೇ ಮಿಂತ್ರಾ (MYNTRA) ತನ್ನ 'ಬಿಗ್ ಫ್ಯಾಶನ್ ಫೆಸ್ಟಿವಲ್' ಅನ್ನು ಅಕ್ಟೋಬರ್ 3-10 ರಿಂದ ನಡೆಸುತ್ತಿದೆ.
ಇದನ್ನೂ ಓದಿ:ನಾಳೆಯಿಂದ ಭಾರತ-ಕೆನಡಾ ವಿಮಾನ ಸೇವೆ ಪುನಾರಂಭ