ಕರ್ನಾಟಕ

karnataka

ETV Bharat / business

ಬಜೆಟ್‌ಗೂ ಮುನ್ನ ಅಧಿಕಾರಿಗಳಿಗೆ 'ಸಿಹಿ'ತಾರಮನ್: 'ಹಲ್ವಾ' ಸಮಾರಂಭದ ಉದ್ದೇಶವೇನು? - ನಿರ್ಮಲಾ ಸೀತಾರಾಮನ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್​ ಅನ್ನು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಬಜೆಟ್‌ ದಾಖಲಾತಿಗಳ ಮುದ್ರಣದ ಆರಂಭವನ್ನು ಸಾಂಕೇತಿಕವಾಗಿ ಬಿಂಬಿಸುವ 'ಹಲ್ವಾ' ತಯಾರಿಕಾ ಕಾರ್ಯಕ್ರಮಕ್ಕೆ ಜನವರಿ 20ರಂದು ಚಾಲನೆ ನೀಡಲಿದ್ದಾರೆ.

halwa
ಹಲ್ವಾ

By

Published : Jan 18, 2020, 9:15 PM IST

ನವದೆಹಲಿ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಸಹಾಯಕ ಸಚಿವ ಅನುರಾಗ್‌ ಠಾಕೂರ್‌ ಅವರು 2020-21ರ ಕೇಂದ್ರ ಬಜೆಟ್‌ನ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯ 'ಹಲ್ವ ಕಾರ್ಯಕ್ರಮ'ಕ್ಕೆ ಜನವರಿ 20ರಂದು ಚಾಲನೆ ನೀಡಲಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್​ ಅನ್ನು ಫೆಬ್ರವರಿ 1ರಂದು ಮಂಡಸಲಿದ್ದಾರೆ. ಬಜೆಟ್‌ ದಾಖಲಾತಿಗಳ ಮುದ್ರಣದ ಆರಂಭವನ್ನು ಸಾಂಕೇತಿಕವಾಗಿ ಬಿಂಬಿಸುವ 'ಹಲ್ವಾ' ತಯಾರಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪ್ರತಿ ವರ್ಷ ಸಾಂಪ್ರದಾಯಿಕವಾಗಿ ದೊಡ್ಡ ಕಡಾಯಿಯೊಂದರಲ್ಲಿ ಸಿಹಿ ಹಲ್ವವನ್ನು ತಯಾರಿಸಿ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ವಿತರಿಸಲಾಗುತ್ತದೆ.

ಸಿಹಿ ವಿತರಣೆಯ ಬಳಿಕ ಬಜೆಟ್‌ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಹಾಗೂ ಸಹಕರಿಸುವ ಸಿಬ್ಬಂದಿ ಲೋಕಸಭೆಯಲ್ಲಿ ಬಜೆಟ್‌ ಮಂಡನೆಯಾಗುವ ತನಕ ಹಣಕಾಸು ಸಚಿವಾಲಯದಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ. ಕುಟುಂಬದ ಜತೆಗಿನ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ. ಬಜೆಟ್‌ನ ಗೌಪ್ಯತೆಯನ್ನು ರಕ್ಷಿಸಲು ಈ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ABOUT THE AUTHOR

...view details