ನವದೆಹಲಿ:ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ, ಬಡ ಹಾಗೂ ಅಸಂಘಟಿತ ನೌಕರರ ಕಲ್ಯಾಣಕ್ಕೆ ರೂಪಿಸಿರುವ ಅಟಲ್ ಪಿಂಚಣಿ ಯೋಜನೆಯ (ಎಪಿವೈ) ಚಂದಾದರ ಪಡೆಯುವಿಕೆ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ಡಿಎ) ಅಡಿ 2015ರಲ್ಲಿ ಅಟಲ್ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು.
ಯೋಜನೆಯ ಪಾವತಿ ಮತ್ತು ಉಪಯೋಗ
* 60ನೇ ವಯಸ್ಸಿಗೆ ಎಷ್ಟು ಪಿಂಚಣಿ ಬೇಕೆಂದು ಬಯಸುವವರು ಪಿಂಚಣಿಗನುಗುಣವಾಗಿ ಹೂಡಿಕೆ ಮಾಡಬೇಕಾಗಿದೆ. ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಅನುಸಾರವಾಗಿ ₹ 1,000, ₹ 2,000, ₹ 3,000, ₹ 4,000 ಹಾಗೂ 5,000 ಪಾವತಿಸಬಹುದು.
* 18ರ ವಯೋಮಾನದವರು ತಮ್ಮ 60ನೇ ವಯಸ್ಸಿಗೆ ₹ 1,000 ಪಿಂಚಣಿ ಪಡೆಯಲು ಇಚ್ಛಿಸಿದರೇ ಮಾಸಿಕ ₹ 42, ₹ 2,000ಕ್ಕೆ ₹ 84, ₹ 3,000ಕ್ಕೆ ₹126, ₹ 4000ಕ್ಕೆ ₹ 168 ಮತ್ತು ₹ 5000ಕ್ಕೆ ₹ 210 ಪ್ರಸ್ತುತ ದಿನಗಳಿಂದ ಸತತ 42 ವರ್ಷಗಳ ಕಾಲ ಪಾವತಿಸಬೇಕಾಗುತ್ತದೆ.
* 30 ವರ್ಷದ ವ್ಯಕ್ತಿಯು ತನ್ನ 60ನೇ ವಯಸ್ಸಿಗೆ ₹ 1000 ಪಿಂಚಣಿ ಬೇಕಾದಲ್ಲಿ ₹ 116, ₹ 2,000ಕ್ಕೆ ₹ 231, ₹ 3,000ಕ್ಕೆ ₹ 347, ₹ 4,000ಕ್ಕೆ ₹ 462 ಮತ್ತು ₹ 5,000ಕ್ಕೆ ₹ 577 ಇಂದಿನಿಂದಲೇ ಮಾಸಿಕ ಪಾವತಿಸಬೇಕು.