ಕರ್ನಾಟಕ

karnataka

ETV Bharat / business

ಬಾಕಿ ಪಾವತಿಸಲು ಷೇರುಗಳನ್ನು ಬಳಸಿಕೊಳ್ಳುವುದಿಲ್ಲ: ಟೆಲಿಕಾಂ ಇಲಾಖೆಗೆ ಏರ್​ಟೆಲ್ ಸ್ಪಷ್ಟನೆ - Adjusted Gross Revenue

ಟೆಲಿಕಾಂ ಆಪರೇಟರ್ ಭಾರ್ತಿ ಏರ್​ಟೆಲ್ ನಿಯಂತ್ರಕ ನಿಯಮಗಳನ್ನು ಸಲ್ಲಿಕೆ ಮಾಡಿದೆ. ಬಾಕಿಯನ್ನು ಪಾವತಿ ಮಾಡಲು ಷೇರುಗಳನ್ನು ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಉಲ್ಲೇಖಿಸಿದೆ..

airtel-not-to-avail-option-of-converting-interest-on-dues-to-equity
ಬಾಕಿ ಪಾವತಿಸಲು ಷೇರುಗಳನ್ನು ಬಳಿಸಿಕೊಳ್ಳುವುದಿಲ್ಲ: ಟೆಲಿಕಾಂ ಇಲಾಖೆಗೆ ಏರ್​ಟೆಲ್ ಸ್ಪಷ್ಟನೆ

By

Published : Jan 7, 2022, 12:31 PM IST

Updated : Jan 7, 2022, 1:42 PM IST

ನವದೆಹಲಿ :ತರಂಗಾಂತರದ ಬೆಲೆ ಏರಿಕೆಯಿಂದ ಹೆಚ್ಚಳವಾದ ಬಡ್ಡಿಯನ್ನು ಮತ್ತು ಎಜಿಆರ್​ಗೆ ಪಾವತಿಸಬೇಕಾಗಿರುವ ಬಾಕಿಯನ್ನು ಪಾವತಿಸಲು ಷೇರುಗಳನ್ನು ಬಳಕೆ ಮಾಡುವುದಿಲ್ಲ ಎಂದು ಟೆಲಿಕಾಂ ಆಪರೇಟರ್ ಭಾರ್ತಿ ಏರ್​ಟೆಲ್ ಸಲ್ಲಿಕೆ ಮಾಡಿರುವ ನಿಯಂತ್ರಕ ನಿಯಮಗಳಲ್ಲಿ ಸ್ಪಷ್ಟನೆ ನೀಡಿದೆ.

ಸುಧಾರಣಾ ಪ್ಯಾಕೇಜ್​ನ ಅಡಿಯಲ್ಲಿ ಈ ಪಾವತಿ ಮಾಡಬೇಕಿದ್ದು, ಶುಕ್ರವಾರ ಭಾರ್ತಿ ಏರ್​ಟೆಲ್ ಈ ರೀತಿಯಾಗಿ ಮಾಹಿತಿ ನೀಡಿದೆ. ಬಿಎಸ್​ಇ ಫೈಲಿಂಗ್​ನಲ್ಲಿ 'ಏರ್​ಟೆಲ್​ ಕಂಪನಿಯು ತರಂಗಾಂತರಗಳ ಹೆಚ್ಚಳವಾದ ಬಡ್ಡಿ ಮತ್ತು ಎಜಿಆರ್ (Adjusted Gross Revenue) ಬಾಕಿಯನ್ನು ಪಾವತಿ ಮಾಡಲು ಷೇರುಗಳನ್ನು ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಟೆಲಿಕಾಂ ಇಲಾಖೆಗೆ ದೃಢಪಡಿಸುತ್ತಿದ್ದೇವೆ' ಎಂದು ಏರ್​ಟೆಲ್​ ಉಲ್ಲೇಖಿಸಿದೆ.

ಇದನ್ನೂ ಓದಿ:NEET-PG ಪ್ರವೇಶ : ಒಬಿಸಿಗಳಿಗೆ ಶೇ.27 ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ

Last Updated : Jan 7, 2022, 1:42 PM IST

ABOUT THE AUTHOR

...view details