ಕರ್ನಾಟಕ

karnataka

ETV Bharat / business

ದೇಶದ ವಿವಿಧ ಭಾಗಗಳಲ್ಲಿ ಏರ್‌ಟೆಲ್ ಇಂಟರ್​​ನೆಟ್ ಸೇವೆ ಸ್ಥಗಿತ: ಬಳಕೆದಾರರು ಹೈರಾಣು - ಏರ್‌ಟೆಲ್ ಇಂಟರ್ನೆಟ್ ಸೇವೆ ಸ್ಥಗಿತ

ದೇಶದ ವಿವಿಧ ಭಾಗಗಳಲ್ಲಿ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಸ್ಥಗಿತವಾಗಿದ್ದು ಬಳಕೆದಾರರು ಟ್ವಿಟರ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Airtel
ಏರ್‌ಟೆಲ್

By

Published : Feb 11, 2022, 1:20 PM IST

ನವದೆಹಲಿ: ಟೆಲಿಕಾಂ ಸೇವಾ ಪೂರೈಕೆದಾರ ಏರ್‌ಟೆಲ್ ಮೊಬೈಲ್ ಇಂಟರ್​​ನೆಟ್ ಮತ್ತು ಬ್ರಾಡ್‌ಬ್ಯಾಂಡ್ ಸೇವೆಗಳು ಶುಕ್ರವಾರ ಸ್ಥಗಿತಗೊಂಡಿವೆ. ಹೀಗಾಗಿ ಏರ್‌ಟೆಲ್ ಸೇವೆಗಳನ್ನು ಬಳಕೆ ಮಾಡುತ್ತಿರುವ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಎರಡೂ ಸೇವೆಗಳು ಸ್ಥಗಿತವಾಗಿವೆ ಎಂದು ತಿಳಿದು ಬಂದಿದೆ. ಏರ್‌ಟೆಲ್​​​ನ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಡೇಟಾದೊಂದಿಗೆ ಸಂಪರ್ಕ ಸಮಸ್ಯೆ ಎದುರಿಸಿದ ನಂತರ ಹಲವಾರು ಬಳಕೆದಾರರು ಟ್ವಿಟರ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಏರ್ಟೆಲ್ ಬ್ರಾಡ್ ಬಾಂಡ್ ಮತ್ತು ಇಂಟರ್‌ನೆಟ್ ಸ್ಥಗಿತದ ಹಿಂದಿನ ಕಾರಣ ತಿಳಿದಿಲ್ಲ. ಟೆಲಿಕಾಂ ಆಪರೇಟರ್ ಈ ಸಮಸ್ಯೆಯ ಬಗ್ಗೆ ಇನ್ನೂ ಸ್ಪಷ್ಟಣೆ ನೀಡಿಲ್ಲ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಏರ್‌ಟೆಲ್ ಇಂಡಿಯಾ, ನಮ್ಮ ಇಂಟರ್​​ನೆಟ್ ಸೇವೆಗಳು ಸ್ವಲ್ಪ ಸಮಯದ ಅಡಚಣೆಯನ್ನು ಹೊಂದಿದ್ದವು. ಇದರಿಂದ ನಿಮಗೆ ಉಂಟಾಗಿರುವ ಅನಾನುಕೂಲತೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಮ್ಮ ತಂಡಗಳು ನಮ್ಮ ಗ್ರಾಹಕರಿಗೆ ತಡೆರಹಿತ ಅನುಭವವನ್ನು ನೀಡಲು ಕೆಲಸ ಮಾಡುತ್ತಿದೆ. ಈಗ ಸರಿಯಾಗಿದ್ದು, ಸಾಮಾನ್ಯಸ್ಥಿತಿಗೆ ಮರಳಿದೆ ಎಂದು ತಿಳಿಸಿದೆ.

ಸ್ಥಗಿತ ಪತ್ತೆ ಸೈಟ್ ಡೌನ್ ಡಿಟೆಕ್ಟರ್ ಪ್ರಕಾರ, ಶೇ.51ರಷ್ಟು ಬಳಕೆದಾರರು ಏರ್​​ಟೆಲ್ ನೆಟ್​​ವರ್ಕ್​ನಲ್ಲಿ ಸಂಪೂರ್ಣ ಬ್ಲಾಕ್ ಔಟ್ ಅನುಭವಿಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಶೇ. 33ರಷ್ಟು ಬಳಕೆದಾರರು ಮೊಬೈಲ್ ಇಂಟರ್​​ನೆಟ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಆದರೆ ಶೇ.16 ರಷ್ಟು ಏರ್​​ಟೆಲ್ ಬಳಕೆದಾರರು ಯಾವುದೇ ಸಿಗ್ನಲ್ ಸಮಸ್ಯೆ ಎದುರಿಸುತ್ತಿಲ್ಲ ಎಂದು ದೂರಿದ್ದಾರೆ.

ಇದನ್ನೂ ಓದಿ:ಸೆನ್ಸೆಕ್ಸ್ ಕುಸಿತ : ಇಂದು ಆರಂಭದಲ್ಲೇ 1000 ಅಂಕ ಕಳೆದುಕೊಂಡು ತಲ್ಲಣ

ABOUT THE AUTHOR

...view details