ನವದೆಹಲಿ: ರೈಲ್ವೆ ಇಲಾಖೆಯು ತನ್ನ ಪುನರಾಭಿವೃದ್ಧಿಗೆ ಒಳಪಡುವ ನಿಲ್ದಾಣದ ಪ್ರಯಾಣಿಕರಿಗೆ ವಿಮಾನ ನಿಲ್ದಾಣ ಮಾದರಿಯಲ್ಲಿ ಶುಲ್ಕ ವಿಧಿಸಲಿದೆ. ಇದರಿಂದಾಗಿ ದರ ಮತ್ತಷ್ಟು ಹೆಚ್ಚಳವಾಗುತ್ತದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ
ಬಳಕೆದಾರ ಅಭಿವೃದ್ಧಿ ಶುಲ್ಕವು (ಯುಡಿಎಫ್) ವಿಮಾನ ಪ್ರಯಾಣಿಕರು ಪಾವತಿಸುವ ತೆರಿಗೆಯ ಭಾಗವಾಗಿದೆ. ಯುಡಿಎಫ್‌ಗೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ಶುಲ್ಕ ವಿಧಿಸಲಾಗುತ್ತದೆ. ಅದರ ದರವು ವಿವಿಧ ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ. ಹೊಸದಾಗಿ ಅಭಿವೃದ್ಧಿ ಹೊಂದಿದ ನಿಲ್ದಾಣಗಳಲ್ಲಿ ಪಾದಚಾರಿಗಳಿಗೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ. ಕೆ. ಯಾದವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.