ನವದೆಹಲಿ:ಪ್ರಸ್ತುತ ವಿಮಾನಯಾನ ದರ ಕ್ಯಾಪ್ ಮಾನ್ಯತೆಯ ಅವಧಿ ಹಾಗೂ ವಿಮಾನಯಾನ ಸಾಮರ್ಥ್ಯದ ಬಳಕೆಯನ್ನು ಕೇಂದ್ರವು ಮೇ 31ರವರೆಗೆ ವಿಸ್ತರಿಸಿದೆ.
ವಿಮಾನ ಶುಲ್ಕ ಕ್ಯಾಪ್, ಆಸನ ಸಾಮರ್ಥ್ಯ ಮೇ 31ರ ತನಕ ಯಥಾವತ್ತಾಗಿ ಮುಂದುವರಿಕೆ - ವಿಮಾನಯಾನ ಶುಲ್ಕ ಕ್ಯಾಪ್ ಅವಧಿ ಮುಂದೂಡಿಕೆ
ಎರಡು ಪ್ರತ್ಯೇಕ ಆದೇಶಗಳಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಏಪ್ರಿಲ್ 30 ರಿಂದ ಮೇ 31ರವರೆಗೆ ವಿಮಾನಯಾನ ಕ್ಯಾಪ್ ಅವಧಿ ವಿಸ್ತರಿಸಿದೆ. ಮತ್ತೊಂದು ಆದೇಶದಲ್ಲಿ ಶೇ 80ರಷ್ಟು ಆಸನ ಸಾಮರ್ಥ್ಯವನ್ನು ನಿಯೋಜಿಸಲು ವಿಮಾನಯಾನ ಸಂಸ್ಥೆಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದಿದೆ.
ಎರಡು ಪ್ರತ್ಯೇಕ ಆದೇಶಗಳಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಏಪ್ರಿಲ್ 30ರಿಂದ ಮೇ 31ರವರೆಗೆ ವಿಮಾನಯಾನ ಕ್ಯಾಪ್ ಅವಧಿ ವಿಸ್ತರಿಸಿದೆ.
ಇತ್ತೀಚಿನವರೆಗೂ ಕೇಂದ್ರವು ಕಡಿಮೆ ಮತ್ತು ಮೇಲಿನ ಮಿತಿ ಹೆಚ್ಚಿಸುವ ಮೂಲಕ ವಿಮಾನಯಾನ ಕ್ಯಾಪ್ ಅನ್ನು ವಿಸ್ತರಿಸಿದೆ. ಈ ಶುಲ್ಕ ಬ್ಯಾಂಡ್‌ಗಳು 2020ರ ಮೇ 21ರಿಂದ ಜಾರಿಗೆ ಬಂದವು. ಶುಲ್ಕ ರಚನೆಯಡಿಯಲ್ಲಿ ಪ್ರಯಾಣದ ಸಮಯದ ಆಧಾರದ ಮೇಲೆ ವಾಯು ಮಾರ್ಗಗಳನ್ನು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವಿಭಾಗವು ಕನಿಷ್ಠ ಮತ್ತು ಗರಿಷ್ಠ ಶುಲ್ಕ ಹೊಂದಿದೆ. ಮತ್ತೊಂದು ಆದೇಶದಲ್ಲಿ ಶೇ 80ರಷ್ಟು ಆಸನ ಸಾಮರ್ಥ್ಯವನ್ನು ನಿಯೋಜಿಸಲು ವಿಮಾನಯಾನ ಸಂಸ್ಥೆಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದಿದೆ.