ಕರ್ನಾಟಕ

karnataka

ETV Bharat / business

ಕರಾವಳಿ ಜನತೆಗೆ ಗುಡ್ ನ್ಯೂಸ್​: ಮುಂಬೈ- ಮಂಗಳೂರು ಮಧ್ಯೆ ನೇರ ವಿಮಾನ ಪುನಾರಂಭ - ಏರ್ ಇಂಡಿಯಾ ವಿಮಾನ ಹಾರಾಟ ಪುನರಾರಂಭ

ಸಾಂಕ್ರಾಮಿಕ ರೋಗದಿಂದಾಗಿ ಸೇವೆಯನ್ನು ಸ್ಥಗಿತಗೊಳಿಸಿದ ತಿಂಗಳುಗಳ ನಂತರ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ವಿಮಾನಯಾನವು ವಾರದಲ್ಲಿ ನಾಲ್ಕು ದಿನ ಇರಲಿದೆ.

Air India
ಏರ್ ಇಂಡಿಯಾ

By

Published : Oct 10, 2020, 7:42 PM IST

ಮಂಗಳೂರು: ಅಕ್ಟೋಬರ್ 12ರಿಂದ ಮುಂಬೈ-ಮಂಗಳೂರು-ಮುಂಬೈ ಮಾರ್ಗದಲ್ಲಿ ಏರ್ ಇಂಡಿಯಾ ನೇರ ವಿಮಾನಯಾನ ಪುನರಾರಂಭಿಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಸಾಂಕ್ರಾಮಿಕ ರೋಗದಿಂದಾಗಿ ಸೇವೆಯನ್ನು ಸ್ಥಗಿತಗೊಳಿಸಿದ ತಿಂಗಳುಗಳ ನಂತರ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ವಿಮಾನಯಾನವು ವಾರದಲ್ಲಿ ನಾಲ್ಕು ದಿನ ನಡೆಯಲಿದೆ.

ವಿಮಾನ ಮುಂಬೈಯಿಂದ ಬೆಳಗ್ಗೆ 10.15ಕ್ಕೆ ಹೊರಟು 12 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ. ಇಲ್ಲಿಂದ ವಿಮಾನ ಮಧ್ಯಾಹ್ನ 12.40ಕ್ಕೆ ಹೊರಟು ಮುಂಬೈಗೆ ಮಧ್ಯಾಹ್ನ 2.20ಕ್ಕೆ ಇಳಿಯಲಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details