ಕರ್ನಾಟಕ

karnataka

ETV Bharat / business

ಬ್ಯಾಂಕ್​​ಗಳು​, ಎನ್​ಡಿಎ ವಿರುದ್ಧ ವಿಜಯ್ ಮಲ್ಯ ಟ್ವೀಟ್​ ವಾರ್​... - ಸಾರ್ವಜನಿಕ ವಲಯದ ಬ್ಯಾಂಕ್​ಗಳು

ಸಾರ್ವಜನಿಕ ವಲಯದ ಬ್ಯಾಂಕ್​ಗಳು 'ದ್ವಿಮುಖ ನೀತಿ ಅನುಸರಿಸುತ್ತಿವೆ' ಎಂದು ಸರಣಿ ಟ್ವೀಟ್ ಮಾಡಿದ ಮಲ್ಯ, 'ತೀವ್ರವಾದ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಜೆಟ್ ಏರ್​ವೇಸ್​ ಸಂಸ್ಥೆಯ ಮೇಲ್ವಿಚಾರಣೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ನಿಯಂತ್ರಣಕ್ಕೆ ಪಡೆಯಬೇಕು' ಎಂದು ಹೇಳಿದ್ದಾರೆ.

ವಿಜಯ್ ಮಲ್ಯ

By

Published : Mar 26, 2019, 6:59 PM IST

ನವದೆಹಲಿ: ವಿವಿಧ ಬ್ಯಾಂಕ್​ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದು ಮರು ಪಾವತಿಸಲಾರದೇ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ಜೆಟ್ ಏರ್​ವೇಸ್ ಸಂಸ್ಥೆಯ ಆರ್ಥಿಕ ಸಂಕಷ್ಟ ಮುಂದಿಟ್ಟುಕೊಂಡು ಎನ್​ಡಿಎ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಬ್ಯಾಂಕ್​ಗಳ ವಿರುದ್ಧ ಟ್ವಿಟ್ಟರ್​ ಮುಖಾಂತರ ವಾಗ್ದಾಳಿ ನಡೆಸಿದ್ದಾರೆ.

'ಸಾರ್ವಜನಿಕ ಬ್ಯಾಂಕ್​ಗಳು ಜೆಟ್​ ಏರ್​ವೇಸ್​ನ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿ ಸಿಬ್ಬಂದಿಯ ಉದ್ಯೋಗ, ಸಂಪರ್ಕ ಮತ್ತು ವಾಯುಯಾನ ಉದ್ಯಮಿಗಳನ್ನು ರಕ್ಷಿಸಲಿವೆ ಎಂಬುದನ್ನು ಸಂತೋಷದಿಂದ ಎದುರು ನೋಡುತ್ತಿದ್ದೇನೆ' ಎಂದು ಟ್ವೀಟಿಸಿದ್ದಾರೆ.

'ಎನ್​ಡಿಎ ಆಡಳಿತಾವಧಿಯಲ್ಲಿ ಭಾರತದ ಸಾರ್ವಜನಿಕ ವಲಯದ ಬ್ಯಾಂಕ್​ಗಳ ದ್ವಿಮುಖ ನೀತಿಯಿಂದಾಗಿ ಏರ್​ಲೈನ್ಸ್​ ಅತ್ಯುತ್ತಮ ನೌಕರರು ಹಾಗೂ ಅತ್ಯುತ್ತಮ ವಿಮಾನಯಾನ ಸಂಸ್ಥೆಗಳು ಉತ್ತಮ ಸೇವೆ ಹಾಗೂ ಲಾಭ ಗಳಿಸುವಲ್ಲಿ ವಿಫಲವಾಗಿದೆ' ಎಂದು ಟ್ವೀಟರ್​ನಲ್ಲಿ ಆಪಾದಿಸಿದ್ದಾರೆ.

'ಕಿಂಗ್​ಫಿಶರ್ ಮತ್ತು ಜೆಟ್ ಏರ್​ಲೈನ್ಸ್ ಕಂಪನಿಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಬೇರೆ ರೀತಿಯಲ್ಲಿ ನೋಡುತ್ತಿದೆ. ಕಿಂಗ್​ಫಿಶರ್ ಏರ್​ಲೈನ್ಸ್ ಹಾಗೂ ಅಲ್ಲಿನ ಉದ್ಯೋಗಿಗಳನ್ನು ರಕ್ಷಿಸಲು ₹ 4 ಸಾವಿರ ಕೋಟಿ ಹೂಡಿಕೆ ಮಾಡಿರುವುದಾಗಿ' ವಿಜಯ್ ಮಲ್ಯ ಹೇಳಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮತ್ತು ಇತರೆ ಬ್ಯಾಂಕ್​ಗಳಿಂದ ಪಡೆದಿರುವ ಸಾಲ, ಮರುಪಾವತಿಸಲು ಬೇಕಾದ ಆಸ್ತಿಯನ್ನ ಅದಕ್ಕೆ ಸಂಬಂಧ ಪಟ್ಟ ದಸ್ತಾವೇಜುಗಳನ್ನ ಕರ್ನಾಟಕ ಹೈಕೋರ್ಟ್​ ಮುಂದೆ ಹಾಜರು ಪಡಿಸಿದ್ದೇನೆ. ಪ್ರಕರಣ ಕೋರ್ಟ್​ ಮುಂದಿದೆ. ಆದರೂ ಬ್ಯಾಂಕ್​ಗಳು ಏಕೆ ನನ್ನ ಹಣ ತೆಗೆದುಕೊಳ್ಳಬಾರದು? ಹಾಗೂ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರುವ ಅವರು, ಇದರಿಂದ ಜೆಟ್ ಏರ್​ವೇಸ್ ಉಳಿಸಲು ಸಾಧ್ಯವಾಗುತ್ತದೆ' ಎಂದು ಟ್ವೀಟ್​​ನಲ್ಲಿ ಮಲ್ಯ ಬರೆದುಕೊಂಡಿದ್ದಾರೆ.

ABOUT THE AUTHOR

...view details