ನವದೆಹಲಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತ ಆರ್ಥಿಕ ಹಿಂಜರಿತ ಅನುಭವಿಸಲಿದ್ದು, 2020-21ನೇ ವರ್ಷದಲ್ಲಿ ಶೇಕಡಾ ನಾಲ್ಕರಷ್ಟು ಹಣಕಾಸಿನ ಕೊರತೆ ಕಾಣಲಿದ್ದು ಜಿಡಿಪಿಯ ಮೇಲೆ ಪರಿಣಾಮ ಬೀರಲಿದೆ ಎಂದು ಏಷಿಯನ್ ಡೆವೆಲೆಪ್ಮೆಂಟ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಹಿಂದಿನ ವರ್ಷವೂ ಕೂಡಾ ಭಾರೀ ಆರ್ಥಿಕ ದುಸ್ಥಿತಿ ಎದುರಾಗಿತ್ತು. ಈ ಬಾರಿ ಹಣಕಾಸು ವರ್ಷದಲ್ಲಿಯೂ ಕೂಡಾ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಎಡಿಬಿ ಬ್ಯಾಂಕ್ ಅಭಿಪ್ರಾಯಪಟ್ಟಿದೆ.
''ನಾವು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಕೊರೊನಾ ಮಹಾಮಾರಿಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ವ್ಯವಹಾರಗಳು ಹಾಗೂ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ ವಿಶ್ವದಾದ್ಯಂತ ಸ್ಥಗಿತಗೊಂಡಿವೆ'' ಎಂದು ಏಷಿಯನ್ ಡೆವೆಲೆಪ್ಮೆಂಟ್ ಬ್ಯಾಂಕ್ ಅಧ್ಯಕ್ಷ ಮಸಾಸ್ತುಗು ಅಸಕಾವಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಇನ್ನೂ ಕೊರೊನಾ ಉಲ್ಬಣಿಸಿಲ್ಲ ಎಂದಿರುವ ಏಷಿಯನ್ ಡೆವೆಲೆಪ್ಮೆಂಟ್ ಬ್ಯಾಂಕ್ ಕೊರೊನಾ ಪೀಡಿತ ರಾಷ್ಟ್ರಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ. ದಕ್ಷಿಣ ಏಷಿಯಾದ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿಯ ಮೇಲೆಯೂ ಕೊರೊನಾ ಪರಿಣಾಮ ಬೀರಿದ್ದು, 2021ರ ಹಣಕಾಸು ವರ್ಷದಿಂದ ನಷ್ಟ 2022ರ ಪುನಶ್ಚೇತನಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.