ಕರ್ನಾಟಕ

karnataka

ETV Bharat / business

2050ರ ವೇಳೆಗೆ ಭಾರತ ವಿಶ್ವದ 2ನೇ ಅತಿದೊಡ್ಡ ಶ್ರೀಮಂತ ರಾಷ್ಟ್ರವಾಗುತ್ತೆ: ಗೌತಮ್ ಅದಾನಿ - ಬಿಲಿಯನೇರ್ ಗೌತಮ್ ಅದಾನಿ

1990ರಲ್ಲಿ ಜಾಗತಿಕ ಜಿಡಿಪಿ 38 ಟ್ರಿಲಿಯನ್ ಡಾಲರ್ ಆಗಿತ್ತು. 30 ವರ್ಷಗಳ ನಂತರ ಈ ಸಂಖ್ಯೆ 90 ಟ್ರಿಲಿಯನ್ ಅಮೆರಿಕನ್ ಡಾಲರ್​ ಆಗಿದೆ. ಇನ್ನೂ 30 ವರ್ಷಗಳ ಕಾಲ ಸಂಯೋಜಿಸಿದರೆ, 2050ರಲ್ಲಿ ಜಾಗತಿಕ ಜಿಡಿಪಿ ಸುಮಾರು 170 ಟ್ರಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ. ಹೀಗಾಗಿ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ..

Economy
ಆರ್ಥಿಕತೆ

By

Published : Sep 28, 2020, 6:33 PM IST

ನವದೆಹಲಿ :2050ರ ವೇಳೆಗೆ ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲಿದೆ. ವ್ಯಾಪಾರ-ವಹಿವಾಟಿನ ಅವಕಾಶಗಳ ವಿಷಯದಲ್ಲಿ ಜಾಗತಿಕ ಗೆಳೆಯರಿಗಿಂತ ಒಂದು ಹೆಜ್ಜೆ ಮುಂದಿರಲಿದೆ ಎಂದು ಬಿಲಿಯನೇರ್ ಗೌತಮ್ ಅದಾನಿ ಹೇಳಿದ್ದಾರೆ.

ಜೆಪಿ ಮೋರ್ಗಾನ್ ಇಂಡಿಯಾ ಶೃಂಗಸಭೆಯ- ಫ್ಯೂಚರ್ ಇನ್ ಫೋಕಸ್​​ನಲ್ಲಿ ಮಾತನಾಡಿದ ಅದಾನಿ ಗ್ರೂಪ್ ಅಧ್ಯಕ್ಷ, ಆತ್ಮಾ ನಿರ್ಭರ ಭಾರತ ಕಾರ್ಯಕ್ರಮವು ಗೇಮ್​ ಚೇಂಜರ್​ ಆಗಿ ಭಾರತೀಯ ಉದ್ಯಮ ಬದಲಾಯಿಸಲಿದೆ. ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತೇನೆ. ಅದು, ನನ್ನ ದೃಷ್ಟಿಯಲ್ಲಿ ಮುಂದಿನ ಮೂರು ದಶಕಗಳಲ್ಲಿ ಭಾರತವು ವಿಶ್ವದ ಶ್ರೇಷ್ಠ ವ್ಯಾಪಾರ ಅವಕಾಶದ ರಾಷ್ಟ್ರವಾಗಲಿದೆ ಎಂದು ಭವಿಷ್ಯ ನುಡಿದರು.

ಭಾರತದ ಜಿಯೋಸ್ಟ್ರಾಟೆಜಿಕ್ ಸ್ಥಾನ ಮತ್ತು ಬೃಹತ್ ಮಾರುಕಟ್ಟೆ ಗಾತ್ರದಲ್ಲಿ ಜಾಗತಿಕ ಸ್ನೇಹಿ ರಾಷ್ಟ್ರಗಳಿಗಿಂತ ಒಂದು ಹೆಜ್ಜೆ ಮುಂದಿರಲಿದೆ. ಸಾಂಕ್ರಾಮಿ ರೋಗವು ಮೂಲಭೂತ ರಾಜಕೀಯ ಸ್ವರೂಪವನ್ನು ರೂಪಿಸುತ್ತಿದೆ ಎಂದರು. ಜಿಡಿಪಿಯ ಕೆಲವು ಅಂಕಿ-ಅಂಶಗಳನ್ನು ಕೂಲಂಕಷವಾಗಿ ನೋಡೋಣ. 1990ರಲ್ಲಿ ಜಾಗತಿಕ ಜಿಡಿಪಿ 38 ಟ್ರಿಲಿಯನ್ ಡಾಲರ್ ಆಗಿತ್ತು. 30 ವರ್ಷಗಳ ನಂತರ ಈ ಸಂಖ್ಯೆ 90 ಟ್ರಿಲಿಯನ್ ಅಮೆರಿಕನ್ ಡಾಲರ್​ ಆಗಿದೆ.

ಇನ್ನೂ 30 ವರ್ಷಗಳ ಕಾಲ ಸಂಯೋಜಿಸಿದ್ರೆ, 2050ರಲ್ಲಿ ಜಾಗತಿಕ ಜಿಡಿಪಿ ಸುಮಾರು 170 ಟ್ರಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ. ಹೀಗಾಗಿ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿವರಿಸಿದರು. ಕೋವಿಡ್​-19 ಸಾಂಕ್ರಾಮಿಕ ಮತ್ತು ಈ ಬಳಿಕದ ಲಾಕ್‌ಡೌನ್​ನಿಂದಾಗಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ದಾಖಲೆಯ ಶೇ 23.9 ರಷ್ಟು ಕುಗ್ಗಿತು. 2021ರ ಮಾರ್ಚ್​ನ ಪೂರ್ಣ ವರ್ಷದಲ್ಲಿ ಆರ್ಥಿಕತೆಯು ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ.

ಒಂದು ದಶಕದಲ್ಲಿ ಒಂದು ರಾಷ್ಟ್ರ ಹೇಗಿರಬಹುದು ಎಂಬುದನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಬೇಕಿದೆ. ನನ್ನ ದೃಷ್ಟಿಯಲ್ಲಿ ತಾಳ್ಮೆ ಮತ್ತು ದೀರ್ಘಕಾಲೀನ ಯೋಜನೆಗಳು ಹಾಗೂ ಸರ್ಕಾರದ ವ್ಯವಹಾರ ಕಾರ್ಯಸೂಚಿ ಜತೆಗೆ ಹೊಂದಾಣಿಕೆಯ ಮೌಲ್ಯವನ್ನು ಸೃಷ್ಟಿಸುತ್ತದೆ ಎಂದರು.

ಭಾರತಕ್ಕೆ ತಡೆಯೊಡ್ಡಿರುವ ಸವಾಲುಗಳ ಕುರಿತು ಮಾತನಾಡಿದ ಅದಾನಿ, ಮುಂದಿನ ದಶಕದಲ್ಲಿ ಭಾರತಕ್ಕೆ 1.5 ರಿಂದ 2 ಟ್ರಿಲಿಯನ್ ಅಮೆರಿಕನ್​ ಡಾಲರ್ ಬಂಡವಾಳ ಬೇಕಾಗುತ್ತದೆ. ಆದರೆ, ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಹಾಗೂ ಕ್ರೆಡಿಟ್ ವರ್ಧಕ ನಿಧಿ, ಬಂಡವಾಳ ರಚನೆ ಸವಾಲುಗಳು, ಅಧಿಕಾರದ ಕೊರತೆಯಂತಹ ರಚನಾತ್ಮಕ ಸುಧಾರಣೆಗಳ ಹೊರತಾಗಿಯೂ ರಾಷ್ಟ್ರ ನಿರ್ಮಾಣ ಮತ್ತು ಹೂಡಿಕೆ ಅವಕಾಶಗಳಿವೆ ಎಂದರು.

ABOUT THE AUTHOR

...view details