ನವದೆಹಲಿ:ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಗೆ ನಿಖರ ಮತ್ತು ವಿಶ್ಲೇಷಣಾತ್ಮಕ ಆಡಿಟ್ ವರದಿಗಳು ಅತ್ಯಗತ್ಯ, ಇವು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅಭಿಪ್ರಾಯ ಪಟ್ಟಿದ್ದಾರೆ.
ನ್ಯಾಷನಲ್ ಅಕಾಡೆಮಿ ಆಫ್ ಆಡಿಟ್ ಮತ್ತು ಅಕೌಂಟ್ಸ್ (ಎನ್‌ಎಎಎ)ನಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ವಲಯದ ವಿಷಯದಲ್ಲಿ ಆಡಿಟಿಂಗ್ ಉತ್ತಮ ಆಡಳಿತದ ಮೂಲಾಧಾರವಾಗಿದೆ. ನ್ಯಾಯಯುತ ಮತ್ತು ನಿಷ್ಪಕ್ಷಪಾತ ಲೆಕ್ಕಪರಿಶೋಧನೆಯು ನಾಗರಿಕರು ಮತ್ತು ಸ್ಟಾಕ್ ಹೋಲ್ಡರ್ಸ್ಗಳಲ್ಲಿ ವಿಶ್ವಾಸ ತುಂಬಲಿದೆ ಎಂದಿದ್ದಾರೆ.
ಜಾಗತಿಕವಾಗಿ ಸಮಗ್ರ ಆರ್ಥಿಕತೆಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತವಾದ ಆಯವ್ಯಯ ವರದಿ ಕೇವಲ ದೇಶೀಯ ಕಾಳಜಿಯಲ್ಲ, ಜಾಗತಿಕ ಮಟ್ಟದಲ್ಲಿ ದೇಶದ ಖ್ಯಾತಿ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಸಾಧನವಾಗಿದೆ ಎಂದಿದ್ದಾರೆ.