ನವ ದೆಹಲಿ:ತೆರಿಗೆ ವಂಚಕರ ವಿರುದ್ಧ ಸಮರ ಸಾರಿರುವ ಜಿಎಸ್‌ಟಿ ಅಧಿಕಾರಿಗಳು 8 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 2020-21ರ ಹಣಕಾಸು ವರ್ಷದಲ್ಲಿ ನಕಲಿ ಇನ್‌ವಾಯ್ಸ್ ಸೃಷ್ಟಿಸಿ 35 ಕೋಟಿ ಮೊತ್ತದ ಜಿಎಸ್‌ಟಿ ಇನ್‌ಪುಟ್ ಟ್ಯಾಕ್ಸ್ ಕ್ರಿಡಿಟ್(ಐಟಿಸಿ) ವಂಚಿಸಿರುವ ಡೀಲರ್‌ಗಳು, ಲೆಕ್ಕ ಪರಿಶೋಧಕರು ಹಲವು ಕಂಪನಿಗಳ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಕಲಿ ಜಿಎಸ್‌ಟಿ ವಿತರಕರ ವಿರುದ್ಧ ದೇಶಾದ್ಯಂತ ಕಾರ್ಯಾಚರಣೆ ನಡೆಸಲಾಗಿತ್ತು. ಕೋವಿಡ್‌ನ 2ನೇ ಅಲೆಯ ಲಾಕ್‌ಡೌನ್ ಹೊರತಾಗಿಯೂ ಸತತ 8 ತಿಂಗಳು 1 ಲಕ್ಷಕ್ಕೂ ಅಧಿಕ ಜಿಎಸ್‌ಟಿ ಸಂಗ್ರಹವಾಗುತ್ತಿತ್ತು. ಆದರೆ ಜೂನ್‌ನಲ್ಲಿ 92,849 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿತ್ತು.
ಇನ್‌ಪುಟ್ ಟ್ಯಾಕ್ಸ್ ಕ್ರಿಡಿಟ್(ಐಟಿಸಿ) ನಿಬಂಧನೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಜಿಎಸ್‌ಟಿ ಅಡಿಯಲ್ಲಿ ತೆರಿಗೆ ವಂಚನೆ ಸಾಮಾನ್ಯವಾಗಿದ್ದು, ತೆರಿಗೆ ಅಧಿಕಾರಿಗಳು ನಿರಂತರವಾಗಿ ಇಂತಹ ವಂಚನೆಗಳನ್ನು ಪತ್ತೆ ಮಾಡುತ್ತಾರೆ. 14 ಮಂದಿ ವೃತ್ತಿಪರ ಸಿಎಗಳು, ವಕೀಲರು, ಮಾಸ್ಟರ್ ಮೈಂಡ್‌ಗಳು, ವಂಚನೆಯ ಫಲಾನುಭವಿಗಳು ಹಾಗೂ ನಿರ್ದೇಶಕರು ಸೇರಿದಂತೆ ಈ ವರ್ಷದಲ್ಲಿ 426 ಮಂದಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.