ಕರ್ನಾಟಕ

karnataka

ಕೊರೊನಾ ಹೊಡೆತಕ್ಕೆ ಮಕಾಡೆ ಮಲಗಿದ ರಿಯಲ್‌ ಎಸ್ಟೇಟ್​: ಗ್ರಾಹಕನ ಖರೀದಿ ಬಜೆಟ್​​ ಕಡಿತ

ಕೋವಿಡ್​-19 ಆಸ್ತಿ ಖರೀದಿದಾರರ ಭಾವನೆ ಸಮೀಕ್ಷೆ ಎಂಬ ಶೀರ್ಷಿಕೆಯಡಿ ಸಮೀಕ್ಷೆ ನಡೆಸಿದೆ. ಸುಮಾರು 67 ಪ್ರತಿಶತದಷ್ಟು ಜನರು ಮನೆ ಖರೀದಿಸುವ ವಿಷಯದಲ್ಲಿ ತಮ್ಮ ಹೂಡಿಕೆ ಯೋಜನೆಗಳೊಂದಿಗೆ ಮುಂದುವರಿಯಲು ಯೋಜಿಸುತ್ತಿದ್ದಾರೆ.

By

Published : May 6, 2020, 10:24 PM IST

Published : May 6, 2020, 10:24 PM IST

Real Estate sector
ರಿಯಲ್​ ಎಸ್ಟೇಟ್​

ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಿಯಲ್​ ಎಸ್ಟೇಟ್​ನ ಶೇ. 73ರಷ್ಟು ವಸತಿ ಗ್ರಾಹಕರು ಆಸ್ತಿ ಖರೀದಿಸಲು ತಮ್ಮ ಬಜೆಟ್ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಮ್ಯಾಜಿಕ್ ​ಬ್ರಿಕ್ಸ್ ಸಮೀಕ್ಷೆಯಲ್ಲಿ ತಿಳಿಸಿದೆ.

ಕೋವಿಡ್​-19 ಆಸ್ತಿ ಖರೀದಿದಾರರ ಭಾವನೆ ಸಮೀಕ್ಷೆ ಎಂಬ ಶೀರ್ಷಿಕೆಯಡಿ ಸಮೀಕ್ಷೆ ನಡೆಸಿದೆ. ಸುಮಾರು 67 ಪ್ರತಿಶತದಷ್ಟು ಜನರು ಇನ್ನು ಮನೆ ಖರೀದಿಸುವ ವಿಷಯದಲ್ಲಿ ತಮ್ಮ ಹೂಡಿಕೆ ಯೋಜನೆಗಳೊಂದಿಗೆ ಮುಂದುವರಿಯಲು ಯೋಜಿಸುತ್ತಿದ್ದಾರೆ. ಆದರೆ, ಅವರ ಖರೀದಿಯ ಯೋಜನೆಗಳು ವಿಳಂಬ ಆಗಬಹುದು ಎಂದು ಹೇಳಿದೆ.

ಸಾಂಕ್ರಾಮಿಕ ಅಥವಾ ಲಾಕ್‌ಡೌನ್‌ನಂತಹ ದುರಂತದ ವೇಳೆ ಮನೆ ಮಾಲೀಕತ್ವದ ಬಲವರ್ಧನೆಯ ಮಹತ್ವವನ್ನು ಈ ಸಮೀಕ್ಷೆ ಎತ್ತಿ ತೋರಿಸುತ್ತದೆ. ಶೇ. 67ರಷ್ಟು ಜನರು ಇನ್ನೂ ಸ್ವಲ್ಪ ವಿಳಂಬವಾದರೂ ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಮನೆ ಖರೀದಿದಾರರಲ್ಲಿ ಶೇ. 73ರಷ್ಟು ಜನರು ತಮ್ಮ ಬಜೆಟ್ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದೆ.

1990ರ ದಶಕದ ಝಡ್​ (Z) ಪೀಳಿಗೆಯಲ್ಲಿ ಜನಿಸಿದವರು ಆಸ್ತಿ ಮಾರುಕಟ್ಟೆಯಿಂದ ಹೊರ ಬಂದಿದ್ದಾರೆ. ಶೇ. 50ರಷ್ಟು ಜನರು ಆಸ್ತಿಯಲ್ಲಿ ಹೂಡಿಕೆ ಯೋಜನೆಯನ್ನು ಹಿಡಿದಿಡುತ್ತಾರೆ ಅಥವಾ ಕೈಬಿಡುತ್ತಾರೆ ಎಂದಿದೆ.

ರಿಯಲ್ ಎಸ್ಟೇಟ್ ಉದ್ಯಮ ಈಗಾಗಲೇ ನಗದು ಬಿಕ್ಕಟ್ಟು ಮತ್ತು ನಿರ್ಮಾಣ ವಿಳಂಬದಿಂದ ಬಳಲುತ್ತಿದೆ. ಈಗ ಕೋವಿಡ್​-19 ಸೋಂಕು ಲಾಕ್‌ಡೌನ್ ಉದ್ಯಮದ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಶ್ರೇಣಿ -1 ನಗರಗಳಲ್ಲಿ ಶೇ. 80ಕ್ಕಿಂತ ಹೆಚ್ಚು ವಸತಿ ಗ್ರಾಹಕರ ಖರೀದಿ ಉದ್ದೇಶವನ್ನು ತಾತ್ಕಾಲಿಕ ಹಿಡಿದಿಡಲಿದೆ ಎಂದು ವರದಿ ಎಚ್ಚರಿಸಿದೆ.

ABOUT THE AUTHOR

...view details