ಮುಂಬೈ :25 ವರ್ಷಗಳ ಹಿಂದೆ ಪ್ರಾರಂಭವಾದ 2ಜಿ ಸೇವೆಗಳಿಂದ ದೂರವಿರಿಸಲು ಮತ್ತು ಅದನ್ನು ಇತಿಹಾಸದ ಭಾಗವನ್ನಾಗಿ ಮಾಡಲು ತುರ್ತಾಗಿ ನೀತಿಗಳನ್ನು ತೆಗೆದುಕೊಳ್ಳಬೇಕಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕರೆ ನೀಡಿದ್ದಾರೆ.
30 ಕೋಟಿ ಭಾರತೀಯರು ಬೇಸಿಕ್ ಇಂಟರ್ನೆಟ್ನಿಂದ ವಂಚಿತ, 2ಜಿ ಸೇವೆ ಕಿತ್ತೊಗೆಯಿರಿ : ಮುಖೇಶ್ ಅಂಬಾನಿ
2ಜಿ ಯುಗದಲ್ಲಿ ಭಾರತದ 300 ಮಿಲಿಯನ್ ಮೊಬೈಲ್ ಚಂದಾದಾರರು ಸಿಕ್ಕಿಹಾಕಿಕೊಂಡಿದ್ದಾರೆ. ಭಾರತ ಸೇರಿ ವಿಶ್ವದ ಇತರ ರಾಷ್ಟ್ರಗಳು ಫೀಚರ್ ಫೋನ್‌ಗಳ ಹೊಸ್ತಿಲಲ್ಲಿ ನಿಂತಿರುವ ಸಮಯದಲ್ಲಿ ಕೆಲವರು ಅಂತರ್ಜಾಲದ ಮೂಲ ಬಳಕೆಯಿಂದಲೂ ದೂರವಿದ್ದಾರೆ..
ಭಾರತದಲ್ಲಿ ತಯಾರಿಸಿ ಮೊದಲ ಮೊಬೈಲ್ ಫೋನ್ ಕರೆಯ ಬೆಳ್ಳಿ ಮಹೋತ್ಸವದಲ್ಲಿದೆ. ಭಾರತ ಸೇರಿ ಇತರ ರಾಷ್ಟ್ರಗಳು 5ಜಿ ಯುಗಕ್ಕೆ ಕಾಲಿಡುತ್ತಿರುವಾಗ ಸುಮಾರು 300 ಮಿಲಿಯನ್ ಗ್ರಾಹಕರನ್ನು 2ಜಿ ಯುಗದ ಫೀಚರ್ ಫೋನ್‌ಗಳು ಬೇಸಿಕ್ ಇಂಟರ್ನೆಟ್ ಸೇವೆಗಳಿಂದ ದೂರವಿರಿಸಿದೆ ಎಂದು ಹೇಳಿದರು.
2ಜಿ ಯುಗದಲ್ಲಿ ಭಾರತದ 300 ಮಿಲಿಯನ್ ಮೊಬೈಲ್ ಚಂದಾದಾರರು ಸಿಕ್ಕಿಹಾಕಿಕೊಂಡಿದ್ದಾರೆ. ಭಾರತ ಸೇರಿ ವಿಶ್ವದ ಇತರ ರಾಷ್ಟ್ರಗಳು ಫೀಚರ್ ಫೋನ್‌ಗಳ ಹೊಸ್ತಿಲಲ್ಲಿ ನಿಂತಿರುವ ಸಮಯದಲ್ಲಿ ಕೆಲವರು ಅಂತರ್ಜಾಲದ ಮೂಲ ಬಳಕೆಯಿಂದಲೂ ದೂರವಿದ್ದಾರೆ. 2ಜಿಯನ್ನು ಇತಿಹಾಸದ ಭಾಗವಾಗಿಸಲು ಅಗತ್ಯ ನೀತಿ ಕ್ರಮಗಳನ್ನು ಅತ್ಯಂತ ತುರ್ತಾಗಿ ತೆಗೆದುಕೊಳ್ಳಬೇಕಿದೆ ಎಂದು ಅಂಬಾನಿ ಪ್ರತಿಪಾದಿಸಿದರು.