ನವದೆಹಲಿ:ಕೊರೊನಾ ಪ್ರೇರಿತ ಆರ್ಥಿಕ ಪುನಶ್ಚೇತನದ 20.97 ಲಕ್ಷ ಕೋಟಿ ರೂ. ಆತ್ಮನಿರ್ಭರ ಭಾರತ ಪ್ಯಾಕೇಜ್ನಡಿ ಘೋಷಿಸಲಾದ ವಿಶೇಷ ನಗದು ಸ್ಕೀಮ್ನಡಿ 8,594 ಕೋಟಿ ರೂ. ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಮತ್ತು ಗೃಹ ಹಣಕಾಸು ಕಂಪನಿಗಳಿಗೆ (ಎಚ್‌ಎಫ್‌ಸಿ) 24 ಪ್ರಸ್ತಾವನೆ ಮಂಜೂರು ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜುಲೈ 1ರಂದು ಪ್ರಾರಂಭವಾದ ವಿಶೇಷ ನಗದು ಯೋಜನೆಯು ಎನ್‌ಬಿಎಫ್‌ಸಿ ಮತ್ತು ಎಚ್‌ಎಫ್‌ಸಿಗೆ ಅಲ್ಪಾವಧಿಯ ನಗದು ಸಮಸ್ಯೆಗಳ ಇತ್ಯರ್ಥಕ್ಕೆ ನೆರವಾಗಲಿದೆ.
30,000 ಕೋಟಿ ರೂ. ವಿಶೇಷ ನಗದು ಯೋಜನೆಯ (ಎಸ್‌ಎಲ್‌ಎಸ್) ಅನುಷ್ಠಾನದ ಪ್ರಸ್ತುತ ಸ್ಥಿತಿಗತಿಯನ್ನು ಹಂಚಿಕೊಂಡ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಆಗಸ್ಟ್ 21ರ ವೇಳೆಗೆ ಒಟ್ಟು ಅನುಮೋದಿತ 8,594 ಕೋಟಿ ರೂ. 24 ಪ್ರಸ್ತಾಪಗಳನ್ನು ತೆರವುಗೊಳಿಸಲಾಗಿದೆ. ಹಣಕಾಸಿನ ನೆರವು ಕೋರಿ ಇನ್ನೂ 17 ಅರ್ಜಿಗಳ 3,684.5 ಕೋಟಿ ರೂ. ಬಾಕಿ ಇದೆ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
2020ರ ಆಗಸ್ಟ್ 21ರ ವೇಳೆಗೆ 3,279 ಕೋಟಿ ರೂ. ಆಗಸ್ಟ್ 7ಕ್ಕೆ ಹೋಲಿಸಿದರೆ, ಮಂಜೂರಾದ ಮೊತ್ತದಲ್ಲಿ 2,195 ಕೋಟಿ ರೂ. ಹೆಚ್ಚಳವಾಗಿದೆ. ವಿತರಿಸಿದ ಮೊತ್ತದಲ್ಲಿ 2,279 ಕೋಟಿ ರೂ. ಏರಿಕೆಯಾಗಿದೆ ಎಂದು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದಾರೆ.