ನವದೆಹಲಿ: ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ (ಎಸ್‌ಎಂಬಿ) ಹೂಡಿಕೆ ಮಾಡುವುದಾಗಿ ಘೋಷಿಸಿದ ಅಮೆಜಾನ್ ಸಿಇಒ ಜೆಫ್ ಬೆಜೊಸ್ ಅವರು, '21ನೇ ಶತಮಾನವು ಭಾರತದ ಶತಮಾನವಾಗಲಿದೆ' ಎಂದು ಅಭಿಪ್ರಾಯಪಟ್ಟರು.
ಅಮೆಜಾನ್ ಎಸ್‌ಎಂಬವ್ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಜೋಸ್, ದೇಶದಲ್ಲಿ ಎಸ್‌ಎಮ್‌ಬಿಗಳನ್ನು ಡಿಜಿಟಲೀಕರಣಗೊಳಿಸಲು ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಘೋಷಿಸಿದರು.
ಇ-ಕಾಮರ್ಸ್ ದಿಗ್ಗಜ ತನ್ನ ಜಾಗತಿಕ ಹೆಜ್ಜೆಗುರುತನ್ನು 2025ರ ವೇಳೆಗೆ 10 ಬಿಲಿಯನ್ ಡಾಲರ್ ಮೌಲ್ಯದ ಮೇಡ್ ಇನ್ ಇಂಡಿಯಾ ಸರಕುಗಳನ್ನು ರಫ್ತು ಮಾಡಲು ಬಳಸುತ್ತದೆ ಎಂದರು.
21ನೇ ಶತಮಾನವು ಭಾರತೀಯ ಶತಮಾನವಾಗಲಿದೆ ಎಂದು ನಾನು ಊಹಿಸುತ್ತೇನೆ. ಭಾರತದ ಹೊಂದಿರುವ ಚಲನಶೀಲತೆಯ ಹೊರತಾಗಿಯೂ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಈ ದೇಶದ ಪ್ರಮುಖ ಲಕ್ಷಣವಾಗಿದೆ. 21ನೇ ಶತಮಾನವು ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಹೆಚ್ಚಿನದಾಗಿರಲಿದೆ ಎಂದು ಹೇಳಿದರು.