ಕರ್ನಾಟಕ

karnataka

ETV Bharat / business

ಜಸ್ಟ್​ 48 ತಾಸಲ್ಲಿ ಕೋಟ್ಯಧಿಪತಿಗಳಾದ ಭಾರತದ 209 ಸಣ್ಣ ವ್ಯಾಪಾರಸ್ಥರು: ಹೇಗೆ ಗೊತ್ತೆ?

ಆಗಸ್ಟ್ 6ರಂದು ಮಧ್ಯರಾತ್ರಿಯಿಂದ ಪ್ರಾರಂಭವಾದ ಪ್ರೈಮ್ ಡೇ ಮಾರಾಟದಲ್ಲಿ ಭಾಗವಹಿಸಿದ 91,000ಕ್ಕೂ ಅಧಿಕ ಎಸ್‌ಎಂಬಿಗಳಲ್ಲಿ 62,000ಕ್ಕೂ ಹೆಚ್ಚು ಮಾರಾಟಗಾರರು ಮೆಟ್ರೊ, ಟೈರ್​-2 ಮತ್ತು ಟೈರ್​ -3 ನಗರಗಳಿಂದ ಬಂದವರು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

Money
ಹಣ

By

Published : Aug 10, 2020, 3:34 PM IST

ಬೆಂಗಳೂರು: ಎರಡು ದಿನಗಳ ಕಾಲ ನಡೆದ ಪ್ರೈಮ್​ ಡೇ ಸೇಲ್​​ನಲ್ಲಿ 91,000 ಸಣ್ಣ ಮತ್ತು ಮಧ್ಯಮ ಗಾತ್ರದ ವರ್ತಕರು ಭಾಗವಹಿಸಿದ್ದರು ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ.

48 ಗಂಟೆ ನಡೆದ ಪ್ರೈಮ್​ ಡೇ ಮಾರಾಟದಲ್ಲಿ 209 ಸಣ್ಣ ಪ್ರಮಾಣದ ವ್ಯಾಪಾರಸ್ಥರು (ಎಸ್‌ಎಂಬಿ) ತನ್ನ ಉತ್ಪನ್ನಗಳ ಮಾರಾಟ ಮಾಡುವ ಮೂಲಕ ಕೋಟ್ಯಧಿಪತಿಗಳಾಗಿದ್ದಾರೆ ಎಂದು ಹೇಳಿದೆ.

ಆಗಸ್ಟ್ 6ರಂದು ಮಧ್ಯರಾತ್ರಿಯಿಂದ ಪ್ರಾರಂಭವಾದ ಪ್ರೈಮ್ ಡೇ ಮಾರಾಟದಲ್ಲಿ ಭಾಗವಹಿಸಿದ 91,000ಕ್ಕೂ ಅಧಿಕ ಎಸ್‌ಎಂಬಿಗಳಲ್ಲಿ 62,000ಕ್ಕೂ ಹೆಚ್ಚು ಮಾರಾಟಗಾರರು ಮೆಟ್ರೊ, ಟೈರ್​-2 ಮತ್ತು ಟೈರ್​ -3 ನಗರಗಳಿಂದ ಬಂದವರು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆಜಾನ್ 31,000 ಎಸ್‌ಎಂಬಿ ಮಾರಾಟಗಾರರು 4,000ಕ್ಕೂ ಹೆಚ್ಚು ಎಸ್‌ಎಂ‌ಬಿ ಮಾರಾಟಗಾರರೊಂದಿಗೆ 48 ಗಂಟೆಗಳ ಅವಧಿಯಲ್ಲಿ 10 ಲಕ್ಷಕ್ಕೂ ಅಧಿಕ ಮಾರಾಟದ ವಹಿವಾಟು ನೋಂದಾಯಿಸಿಕೊಂಡಿದ್ದಾರೆ ಎಂದಿದೆ.

ಈ ಪ್ರೈಮ್​ ಡೇ ಸೇಲ್​ ಅನ್ನು ನಮ್ಮ ಸಣ್ಣ ವ್ಯಾಪಾರ (ಎಸ್‌ಎಂಬಿ) ಪಾಲುದಾರರಿಗೆ ಸಮರ್ಪಿಸಲಾಗಿದೆ. ಅಮೆಜಾನ್​ನಿಂದ ಅಧಿಕ ಆದಾಯವನ್ನು ಎದುರು ನೋಡುತ್ತಿದ್ದಾರೆ. ನಮ್ಮ ಜೊತೆ ವ್ಯವಹಾರ ಮುಂದುವರಿಸಲು ಬಯಸಿದ್ದಾರೆ ಎಂದು ಅಮೆಜಾನ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಮಿತ್ ಅಗರ್ವಾಲ್ ತಿಳಿಸಿದ್ದಾರೆ.

ಕುಶಲಕರ್ಮಿಗಳು, ಮಹಿಳಾ ಉದ್ಯಮಿಗಳು, ಬುಡಕಟ್ಟು ಸಮುದಾಯದವರು ಕೈಯಿಂದ ತಯಾರಿಸಿದ ಕುಂಬಾರಿಕೆ, ಆಭರಣಗಳತಂಹ ಉತ್ಪನ್ನಗಳನ್ನು ಮಾರಾಟ ಮಾಡಲಾಗಿತ್ತು. ದೇಶಾದ್ಯಂತ ಕುಶಲಕರ್ಮಿಗಳಿಂದ ಪಡೆದ 270ಕ್ಕಿಂತಲೂ ಹೆಚ್ಚಿನ ಕರಕುಶಲ ವಸ್ತುಗಳು ಸೇಲ್​ಗೆ ಇರಿಸಲಾಗಿತ್ತು. 17 ವಿಭಾಗಗಳಲ್ಲಿ 1000ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಬಿಡುಗಡೆ ಆದವು.

ABOUT THE AUTHOR

...view details