ನವದೆಹಲಿ: ಸರ್ಕಾರಿ ಆಡಳಿತ ವರ್ಗ ಕೆಲವೊಮ್ಮೆ ಅಸಾಮಾನ್ಯವಾಗಿ ಕೆಲಸ ಮಾಡುತ್ತದೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಪ್ರಧಾನ ನರೇಂದ್ರ ಮೋದಿ ಅವರು ಅನುಮೋದಿಸಿದ ₹ 1.45 ಲಕ್ಷ ಕೋಟಿಯಷ್ಟು ಕಾರ್ಪೊರೇಟ್ ತೆರಿಗೆ ದರ ಕಡಿತವನ್ನು ಜಾರಿಗೆ ತರಲು 'ರೂಲ್ 12' ಎಂಬ ವಿಶೇಷ ವಿತರಣ ಅಧಿಕಾರ ಅವರು ಬಳಸಿದ್ದು, ಅಧಿಕಾರಿಗಳು ಇದನ್ನು 36 ಗಂಟೆಯಲ್ಲಿ ಜಾರಿಗೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಜಸ್ಟ್ 36 ಗಂಟೆಯಲ್ಲಿ ₹ 1.45 ಲಕ್ಷ ಕೋಟಿ ಕಾರ್ಪೊರೇಟ್ ತೆರಿಗೆ ಕಡಿತದ ನಿರ್ಧಾರ...! - ಮೋದಿ ಸರ್ಕಾರದ ನಿರ್ಧಾರ
ಯಾವುದೇ ನಿರ್ದಿಷ್ಟ ಸಂದರ್ಭದಲ್ಲಿ ತೀವ್ರ ತುರ್ತು ಅಥವಾ ಅನಿರೀಕ್ಷಿತ ಆಕಸ್ಮಿಕ ಪರಿಸ್ಥಿತಿಯ ನಿಭಾಯಿಸಲು 1961ರ ಭಾರತ ಸರ್ಕಾರದ (ವ್ಯವಹಾರದ ವಹಿವಾಟು ) ನಿಯಮ 12 ಸೂಚಿಸುತ್ತದೆ. ಈ ನಿಯಮ ಪ್ರಧಾನ ಮಂತ್ರಿಗಳಿಗೆ ಅಧಿಕಾರ ನೀಡುತ್ತದೆ.
ಕಾರ್ಪೊರೇಟ್ ತೆರಿಗೆ ಕಡಿತ
'ರೂಲ್ 12' ಪ್ರಧಾನಮಂತ್ರಿಗೆ ವಿಶೇಷ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ. ಈ ಬಳಿಕ ಅದನ್ನು ಸಂಪುಟ ಅಂಗೀಕರಿಸುತ್ತದೆ. ಈ ಅಧಿಕಾರವನ್ನು ಬಳಸಿಕೊಂಡು ಸಾಂಸ್ಥಿಕ ಸಂಸ್ಥೆಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂಬ ಆಪಾದನೆ ಕೇಳಿಬಂದಿದೆ.
ಯಾವುದೇ ನಿರ್ದಿಷ್ಟ ಸಂದರ್ಭದಲ್ಲಿ ತೀವ್ರ ತುರ್ತು ಅಥವಾ ಅನಿರೀಕ್ಷಿತ ಆಕಸ್ಮಿಕ ಪರಿಸ್ಥಿತಿಯ ನಿಭಾಯಿಸಲು 1961ರ ಭಾರತ ಸರ್ಕಾರದ (ವ್ಯವಹಾರದ ವಹಿವಾಟು ) ನಿಯಮ 12 ಸೂಚಿಸುತ್ತದೆ. ಈ ನಿಯಮ ಪ್ರಧಾನ ಮಂತ್ರಿಗಳಿಗೆ ಅಧಿಕಾರ ನೀಡುತ್ತದೆ.