ಕರ್ನಾಟಕ

karnataka

ETV Bharat / briefs

ದೇಶದಲ್ಲೇ ಮೊದಲು... ಡ್ರೋನ್​ ಮೂಲಕ ಬರಲಿದೆ ನಿಮ್ಮಿಷ್ಟದ ಆಹಾರ..! - ಸೇವೆ

ಸ್ವಿಗ್ಗಿ, ಜೊಮ್ಯಾಟೋ, ಉಬರ್ ಈಟ್ಸ್​ನಂತಹ ಆನ್​ಲೈನ್ ಆಹಾರ ವಿತರಣಾ ಸಂಸ್ಥೆಗಳು ಬುಕಿಂಗ್​ ಮೂಲಕ ಆಯಾಯ ಗ್ರಾಹಕರ ಮನೆಬಾಗಿಲಿಗೆ ಆಹಾರವನ್ನು ನೀಡುವ ಕಾರ್ಯ ಮಾಡುತ್ತಿವೆ. ಜೊಮ್ಯಾಟೋ ಇದೀಗ ವಿತರಣೆಯ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ.

ಡ್ರೋನ್

By

Published : Jun 13, 2019, 10:37 AM IST

ನವದೆಹಲಿ: ಒಂದು ಕಾಲದಲ್ಲಿ ಆಹಾರ ಮನೆ ಇಲ್ಲವೇ ಹೋಟೆಲ್​ನಲ್ಲಿ ಮಾತ್ರ ದೊರೆಯುತ್ತಿತ್ತು. ಜಮಾನ ಬದಲಾಗಿದ್ದು, ಆಹಾರ ಇದೀಗ ಮನೆಬಾಗಿಲಿಗೆ ಬರುವ ವ್ಯವಸ್ಥೆಗಳು ಹುಟ್ಟಿಕೊಂಡಿವೆ.

ಸ್ವಿಗ್ಗಿ, ಜೊಮ್ಯಾಟೋ, ಉಬರ್ ಈಟ್ಸ್​ನಂತಹ ಆನ್​ಲೈನ್ ಆಹಾರ ವಿತರಣಾ ಸಂಸ್ಥೆಗಳು ಬುಕಿಂಗ್​ ಮೂಲಕ ಆಯಾ ಗ್ರಾಹಕರ ಮನೆಬಾಗಿಲಿಗೆ ಆಹಾರವನ್ನು ನೀಡುವ ಕಾರ್ಯ ಮಾಡುತ್ತಿವೆ. ಜೊಮ್ಯಾಟೋ ಇದೀಗ ವಿತರಣೆಯ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ.

ಹೆಚ್ಚಾದ ವಾಹನ ದಟ್ಟಣೆ, ಟ್ರಾಫಿಕ್​ ಸಮಸ್ಯೆಯಿಂದ ಆಹಾರವನ್ನು ನಿರ್ದಿಷ್ಟ ಸಮಯದಲ್ಲಿ ವಿತರಿಸಲು ಕಷ್ಟವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಜೊಮ್ಯಾಟೋ ಸಂಸ್ಥೆ ಡ್ರೋನ್ ಮೂಲಕ ಸೇವೆ ನೀಡಲು ಉದ್ದೇಶಿಸಿದೆ.

ಜೊಮ್ಯಾಟೋ ಸಂಸ್ಥೆಯ ಈ ನೂತನ ಯೋಜನೆಯ ಪರೀಕ್ಷಾರ್ಥ ಪ್ರಯೋಗ ನಡೆದಿದ್ದು, ಯಾವಾಗ ಕಾರ್ಯರೂಪಕ್ಕೆ ಬರಲಿದೆ ಎನ್ನುದನ್ನು ಸಂಸ್ಥೆ ಸ್ಪಷ್ಟಪಡಿಸಿಲ್ಲ.

ಗ್ರಾಮೀಣ ಪ್ರದೇಶವೊಂದರಲ್ಲಿ ಕಳೆದ ವಾರ ಡ್ರೋನ್ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಜೋಮ್ಯಾಟೋ ಸಂಸ್ಥೆ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದೆ.

ರಸ್ತೆಮಾರ್ಗದಲ್ಲಿ ಸಮರ್ಪಕ ಸೇವೆ ನೀಡಲು ಕಷ್ಟವಾಗುತ್ತಿದ್ದು, ವಾಯುಮಾರ್ಗದಲ್ಲಿ ಸೇವೆ ನೀಡಲು ಚಿಂತಿಸಲಾಗಿದೆ. ಡ್ರೋನ್​​ ಐದರಿಂದ ಹತ್ತು ಕಿ.ಮೀ ದೂರದವರೆಗೆ ಸಾಗಲಿದ್ದು ಇದರ ವೇಗ 80 kmph ಆಗಿರಲಿದೆ. ಈ ಡ್ರೋನ್​ ಐದು ಕೆ.ಜಿ ಆಹಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಉತ್ತಮ ಹಾಗೂ ನಿರ್ದಿಷ್ಟ ಸಮಯದಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವುದು ನಮ್ಮ ಗುರಿ ಎಂದು ಸಂಸ್ಥೆಯ ಮುಖ್ಯಸ್ಥ ದೀಪಿಂದರ್ ಗೋಯಲ್ ಹೇಳಿದ್ದಾರೆ.

ABOUT THE AUTHOR

...view details