ಬೆಂಗಳೂರು:ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 17ರನ್ಗಳ ರೋಚಕ ಗೆಲುವು ದಾಖಲು ಮಾಡಿದ್ದು, ಐಪಿಎಲ್ನಲ್ಲಿ ಪ್ಲೇ-ಆಪ್ ಕನಸು ಜೀವಂತವಾಗಿಟ್ಟುಕೊಂಡಿದೆ.
ಪಂದ್ಯದಲ್ಲಿ ಜಯಭೇರಿ ಸಾಧಿಸುತ್ತಿದ್ದಂತೆ ಹೊಟೇಲ್ಗೆ ತೆರಳಿದ ಆರ್ಸಿಬಿ ಆಟಗಾರರು ಕೇಕ್ ಕಟ್ ಮಾಡಿ ಖುಷಿ ಪಟ್ಟರು. ಇದೇ ವೇಳೆ ತಂಡದ ಸ್ಪಿನ್ ಬೌಲರ್ ಯಜುವೇಂದ್ರ ಚಹಾಲ್, ಕೋಚ್ ಗ್ಯಾರಿ ಕಸ್ಟರ್ನ್ ಎದುರು ಕುಣಿದು ಕುಪ್ಪಳಿಸಿದ್ರು.
ಇದೇ ಮೊದಲ ಬಾರಿಗೆ ಚಹಾಲ್ ಈ ರೀತಿಯಾಗಿ ಡ್ಯಾನ್ಸ್ ಮಾಡಿದ್ದು, ಅದನ್ನ ಆರ್ಸಿಬಿ ತನ್ನ ಟ್ವಿಟರ್ ಅಕೌಂಟ್ನಲ್ಲಿ ಹಾಕಿಕೊಂಡಿದೆ. ಇನ್ನು ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಮೈದಾನದಲ್ಲಿ ಗೇಲ್ ಹಾಗೂ ಕೊಹ್ಲಿ ಪರಸ್ಪರ ಅಪ್ಪಿಕೊಂಡು ಸಂತಸ ಹಂಚಿಕೊಂಡರು.
ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ನೀಡಿದ್ದ 202 ರನ್ಗಳ ಗುರಿ ಬೆನ್ನತ್ತಿದ್ದ ಪಂಜಾಬ್, 20 ಓವರ್ಗಳಲ್ಲಿ 185 ರನ್ ಗಳಿಕೆ ಮಾಡಲು ಶಕ್ತವಾಗಿತ್ತು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಆರ್ಸಿಬಿ ಹ್ಯಾಟ್ರಿಕ್ ಗೆಲುವು ದಾಖಲು ಮಾಡಿದಂತಾಗಿದೆ.