ಮುಂಬೈ:ಟೀಂ ಇಂಡಿಯಾ ಕಂಡಿರುವ ಅದ್ಭುತ ಆಲ್ರೌಂಡರ್ ಯುವರಾಜ್ ಸಿಂಗ್ ಕೊನೆಗೂ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಭಾರತ 2007ರ ಟಿ-20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಯುವಿಗೆ 2007ರಲ್ಲಿ ಸಿಕ್ಸರ್ ಕಿಂಗ್ ಎಂಬ ನಾಮಾಕಿಂತ ಕೂಡ ಹುಡಿಕಿಕೊಂಡು ಬಂದಿತ್ತು. ಅದರ ಹಿಂದೆ ರೋಚಕ ಕಹಾನಿ ಇದೆ.
2007ರಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ ಯುವಿ... ಅದರ ಹಿಂದಿದೆ ಅದ್ಭುತ ಕಹಾನಿ!
2007ರ ಟಿ -20 ವಿಶ್ವಕಪ್ನಲ್ಲಿ ಯುವಿ ಒಂದೇ ಓವರ್ನ ಎಲ್ಲ ಎಸೆತಗಳನ್ನ ಸಿಕ್ಸರ್ ಗೆರೆ ದಾಟಿಸಿ ಸಿಕ್ಸರ್ಗಳ ಸರದಾರನೆಂಬ ಹೆಸರುಗಳಿಸಿದ್ದರು. ಇದರ ಹಿಂದೆ ರೋಚಕ ಕಹಾನಿ ಇದೆ.
2007ರ ಟಿ-20 ವಿಶ್ವಕಪ್ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಟೀಂ ಇಂಡಿಯಾ ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡು 18 ಓವರ್ಗಳಲ್ಲಿ 3ವಿಕೆಟ್ ಕಳೆದುಕೊಂಡು 171ರನ್ಗಳಿಕೆ ಮಾಡಿತ್ತು. ಈ ವೇಳೆ, ಎಂಎಸ್ ಧೋನಿ ಹಾಗೂ ಯುವರಾಜ್ ಸಿಂಗ್ ಮೈದಾನದಲ್ಲಿದ್ದರು. ಆಗ ಎದುರಾಳಿ ತಂಡದ ಆಟಗಾರ ಆಂಡ್ರೋ ಫ್ಲಿಂಟಾಪ್ ಯುವಿ ಜತೆ ವಾಗ್ವಾದ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಯುವಿ ಸ್ಟುವರ್ಟ್ ಬಾರ್ಡ್ ಎಸೆದಿದ್ದ 19ನೇ ಓವರ್ನ ಎಲ್ಲ ಎಸೆತಗಳನ್ನ ಸಿಕ್ಸರ್ ಗೆರೆ ದಾಟಿಸಿದ್ದರು.
ಇದೇ ಪಂದ್ಯದಲ್ಲಿ ಯುವಿ ಕೇವಲ 14 ಎಸೆತಗಳಲ್ಲಿ 58ರನ್ಗಳಿಕೆ ಮಾಡಿದ್ದರು. ಇನ್ನು ಟಿ-20 ಇತಿಹಾಸದಲ್ಲಿ ಭಾರತ ನಿರ್ಮಿಸಿರುವ ಅತಿ ಹೆಚ್ಚು ಸ್ಕೋರ್ಗಳ ಪಂದ್ಯದಲ್ಲಿ ಇದು ಒಂದು. ಕೇವಲ 20 ಓವರ್ಗಳಲ್ಲಿ ಭಾರತ 218ರನ್ಗಳಿಕೆ ಮಾಡಿದ್ದರ ಜತೆಗೆ ಪಂದ್ಯದಲ್ಲಿ ಗೆಲುವು ಕಂಡಿತ್ತು. ಇದಾದ ಬಳಿಕ ಯುವರಾಜ್ ಸಿಂಗ್ ಸಿಕ್ಸರ್ಗಳ ಸರದಾರ ಎಂಬ ಹೆಸರು ಕೂಡ ಗಳಿಸಿದರು.