ನವದೆಹಲಿ:ಭಾರತದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ ಸ್ಟ್ರೈನ್ ಹರಡುವಿಕೆ ಮುಂದುವರೆದಿದೆ. ರಷ್ಯಾ ಸೇರಿದಂತೆ 70 ದೇಶಗಳಲ್ಲಿ ಎರಡನೇ ಅಲೆಯಲ್ಲಿ ಸಾವುಗಳಲ್ಲಿ ಏರಿಕೆ ಕಂಡುಬಂದಿರುವುದಕ್ಕೆ 'ಇಂಡಿಯನ್ ಸ್ಟ್ರೇನ್' ಕಾರಣ ಎಂದು ರಷ್ಯಾ ಆರೋಪಿಸಿದೆ.
2ನೇ ಅಲೆಯಲ್ಲಿ ವಿಶ್ವಾದ್ಯಂತ ಹೆಚ್ಚಿನ ಸಾವಿಗೆ 'ಇಂಡಿಯನ್ ಸ್ಟ್ರೇನ್' ಕಾರಣ; ರಷ್ಯಾ - ರಷ್ಯಾದಲ್ಲಿ ಕೊರೊನಾ ವೈರಸ್ನ 'ಇಂಡಿಯನ್ ಸ್ಟ್ರೈನ್'
ಕೊರೊನಾ ವೈರಸ್ನ 'ಇಂಡಿಯನ್ ಸ್ಟ್ರೇನ್' ರಷ್ಯಾ ಸೇರಿದಂತೆ 70 ದೇಶಗಳಲ್ಲಿ ಸಾವುಗಳಲ್ಲಿ ಏರಿಕೆ ಕಂಡುಬಂದಿರುವುದಕ್ಕೆ ಕಾರಣವಾಗಿದೆ ಎಂದು ರಷ್ಯಾದ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

"ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಸಾಮೂಹಿಕ ನಿರ್ಲಕ್ಷ್ಯದಿಂದಾಗಿ ಸೋಂಕಿನ ಪ್ರಮಾಣದಲ್ಲಿನ ಏರಿಕೆಯನ್ನು ತಪ್ಪಿಸಲು ನಮಗೆ ಸಾಧ್ಯವಾಗಲಿಲ್ಲ." ಎಂದು ಸೆಂಟ್ರಲ್ ರಿಸರ್ಚ್ ಇನ್ಸಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯಲ್ಲಿ ಕ್ಲಿನಿಕಲ್ ಮತ್ತು ವಿಶ್ಲೇಷಣಾತ್ಮಕ ಕಾರ್ಯಗಳ ಉಪ ನಿರ್ದೇಶಕಿ ನತಾಲಿಯಾ ಪ್ಶೆನಿಚ್ನಾಯಾ ರಷ್ಯಾದ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದರು.
"ಇಂಡಿಯನ್ ಸ್ಟ್ರೇನ್ ಪ್ರಸರಣಗೊಳ್ಳುತ್ತಿರುವಾಗ ಈ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ ಮತ್ತು ಜನಸಂಖ್ಯೆಯ ಅತ್ಯಂತ ಸಕ್ರಿಯ ಭಾಗವಾದ ಯುವಕರು ಅದನ್ನು ತಮ್ಮಲ್ಲಿ ಮತ್ತು ಇತರ ವಯೋಮಾನದವರಲ್ಲಿ ಹರಡುತ್ತಿದ್ದಾರೆ." ಎಂದು ಹೇಳಿದ್ದಾರೆ.