ಕರ್ನಾಟಕ

karnataka

ETV Bharat / briefs

ವಿಶ್ವ ಪರಿಸರ ದಿನ ಎಲ್ಲರೂ ಗಿಡ ನೆಟ್ರೇ.. ಈ ಹುಡುಗರು ಮರಗಳಿಗಾಗಿ ಪ್ರತಿಭಟನೆ ಕುಳಿತರು.. - undefined

ನೂರು ವರ್ಷಗಳ ಮರಗಳನ್ನು ಉಳಿಸಿಕೊಳ್ಳಲು ಯುವ ಸಂಚಲನದ ಹುಡುಗರು ಟಿಬಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಮರಗಳನ್ನು ಕಡಿಯದೆ ರಸ್ತೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಮರಗಳನ್ನು ಕಡಿಯದಂತೆ ಯುವಕರ ಪ್ರತಿಭಟನೆ

By

Published : Jun 5, 2019, 10:00 PM IST

ದೊಡ್ಡಬಳ್ಳಾಪುರ : ವಿಶ್ವ ಪರಿಸರ ದಿನದಂದು ಎಲ್ಲರಿಗೂ ಗಿಡ ನೆಡುವ ಆಸೆ. ಆದರೆ, ಈ ಹುಡುಗರು ರಸ್ತೆ ಬದಿಯ ಬೃಹತ್ ಮರಗಳನ್ನು ಉಳಿಸಿಕೊಳ್ಳಲು ಪ್ರತಿಭಟನೆ ಕುಳಿತಿದ್ದರು.

ರಾಷ್ಟ್ರೀಯ ಹೆದ್ದಾರಿ 207ರ ಡಾಬಸ್‌ಪೇಟೆ ಮತ್ತು ಹೊಸೂರು ರಸ್ತೆಯ ಅಗಲೀಕರಣ ಕಾಮಾಗಾರಿ ನಡೆಯುತ್ತಿದೆ. ರಸ್ತೆಯ ಅಗಲೀಕರಣದಿಂದ ದೊಡ್ಡಬಳ್ಳಾಪುರ ಹೊರವಲಯದ ಟಿಬಿ ಸರ್ಕಲ್‌ನಲ್ಲಿರುವ ಬೃಹತ್ ಮರಗಳಿಗೆ ಕೊಡಲಿ ಬೀಳಲಿದೆ. ಮರಗಳನ್ನು ಕಡಿಯಲು ನೋಟಿಫಿಕೇಷನ್ ಸಹ ಹೊರ ಬಂದಿದೆ.

ಮರಗಳನ್ನು ಕಡಿಯದಂತೆ ಯುವಕರ ಪ್ರತಿಭಟನೆ

ನೂರು ವರ್ಷಗಳ ಮರಗಳನ್ನು ಉಳಿಸಿಕೊಳ್ಳಲು ಯುವ ಸಂಚಲನದ ಹುಡುಗರು ಟಿಬಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಮರಗಳನ್ನು ಕಡಿಯದೆ ರಸ್ತೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

For All Latest Updates

TAGGED:

ABOUT THE AUTHOR

...view details