ಕರ್ನಾಟಕ

karnataka

ETV Bharat / briefs

ಅಜ್ಜಿಯ ಕೊಲೆ, ಪೋಷಕರ ಮೇಲೆ ಹಲ್ಲೆ... ಫೇಸ್​ಬುಕ್​​ನಲ್ಲಿ ಲೈವ್​​​​ ಮಾಡಿದ ಭೂಪ! - ಡ್ರಗ್ಸ್​ ವಿಚಾರ

ಡ್ರಗ್ಸ್​ ನಶೆಯಲ್ಲಿದ್ದ ವ್ಯಕ್ತಿ ತನ್ನ ಪೋಷಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಅಜ್ಜಿ ಸಾವನ್ನಪ್ಪಿದ್ದು, ಪೋಷಕರು ಗಾಯಗೊಂಡಿದ್ದಾರೆ.

ಇಂದ್ರನಿಲ್​ ರಾಯ್​,ಆರೋಪಿ

By

Published : Jun 10, 2019, 9:42 PM IST

ಕೋಲ್ಕತ್ತಾ: ವ್ಯಕ್ತಿಯೋರ್ವ ಅಜ್ಜಿಯ ಕೊಲೆ ಮಾಡಿ, ಪೋಷಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಆ ದೃಶ್ಯವನ್ನ ಫೇಸ್​ಬುಕ್​​ನಲ್ಲಿ ಲೈವ್​ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಕೀಟಾ ಪ್ರದೇಶದಲ್ಲಿ ನಡೆದಿದೆ.

ಭಾನುವಾರ ರಾತ್ರಿ ತನ್ನ ಪೋಷಕರೊಂದಿಗೆ ಡ್ರಗ್ಸ್​ ವಿಚಾರವಾಗಿ ಜಗಳವಾಡಿದ್ದು, ಅದು ತಾರಕ್ಕೇರಿದಾಗ ಹರಿತವಾದ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದೇ ವೇಳೆ ಆತನ ಅಜ್ಜಿ ಆರತಿ ರಾಯ್​ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರರು ಗಾಯಗೊಂಡಿದ್ದಾರೆ. ಈ ವೇಳೆ ಆತ ಡ್ರಗ್ಸ್​ ನಶೆಯಲ್ಲಿದ್ದ ಎಂದು ತಿಳಿದು ಬಂದಿದ್ದು, ಘಟನೆಯ ದೃಶ್ಯಾವಳಿ ಫೇಸ್​ಬುಕ್​​ನಲ್ಲಿ ಲೈವ್​​ ಕೂಡ ಮಾಡಿದ್ದಾನೆ.

27 ವರ್ಷದ ಇಂದ್ರನಿಲ್​ ರಾಯ್ ಸ್ಥಳೀಯ ಕಾಲೇಜ್​ವೊಂದರ ವಿದ್ಯಾರ್ಥಿಯಾಗಿದ್ದು, ಈಗಾಗಲೇ ಪೊಲೀಸರು ಆತನ ಬಂಧನ ಮಾಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆರೋಪಿ, ತಾನು ಮಾಡಿರುವ ಕೃತ್ಯದ ಬಗ್ಗೆ ಗೊತ್ತಿಲ್ಲ ಎಂದಿದ್ದಾನಂತೆ.

ABOUT THE AUTHOR

...view details