ಸುಬ್ರಹ್ಮಣ್ಯ(ದ.ಕ):ಸುಳ್ಯ ತಾಲೂಕಿನ ಏನೆಕಲ್ಲು ಎಂಬಲ್ಲಿನ ಹುಡುಗಿಯೊಬ್ಬಳನ್ನು ಅತ್ಯಾಚಾರ ನಡೆಸಿದ ಆರೋಪಕ್ಕೊಳಗಾಗಿರುವ ಗುತ್ತಿಗಾರಿನ ಯುವಕನೊಬ್ಬನ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ದಲಿತ ದೌರ್ಜನ್ಯದ ಕೇಸು ದಾಖಲಾಗಿದೆ.
ಬಾಲಕಿಯನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ.. ಗರ್ಭಿಣಿಯಾದ ಸಂತ್ರಸ್ತೆ! - ಸುಬ್ರಹ್ಮಣ್ಯ ಸುದ್ದಿ
ಈತ ಏನೆಕಲ್ಲು ಗ್ರಾಮದ 17 ವರ್ಷದ ದಲಿತ ಬಾಲಕಿಯನ್ನು ಕಳೆದ ಮಾರ್ಚ್ನಲ್ಲಿ ಕಡಬದ ಲಾಡ್ಜ್ ಒಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ನೀಡಲಾಗಿದೆ.
Subrahmanya
ಕಡಬದ ಲಾಡ್ಜ್‌ಗೆ ಕರೆದೊಯ್ದ ಆರೋಪಿ ಗುತ್ತಿಗಾರು ಮೆಟ್ಟಿನಡ್ಕದ ಅರುಣ್ ಗೌಡ (22) ಎಂಬಾತನನ್ನು ಸುಬ್ರಹ್ಮಣ್ಯ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಈತ ಏನೆಕಲ್ಲು ಗ್ರಾಮದ 17 ವರ್ಷದ ದಲಿತ ಬಾಲಕಿಯನ್ನು ಕಳೆದ ಮಾರ್ಚ್ನಲ್ಲಿ ಕಡಬದ ಲಾಡ್ಜ್ ಒಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆಂದು ದೂರು ನೀಡಲಾಗಿದೆ.
ಘಟನೆ ಕುರಿತು ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪುತ್ತೂರು ಎಎಸ್ಪಿಯವರು ತನಿಖೆ ನಡೆಸುತ್ತಿದ್ದಾರೆ. ಈಗ ಬಾಲಕಿ ಗರ್ಭಿಣಿ ಎಂದು ತಿಳಿದು ಬಂದಿದೆ.
Last Updated : May 9, 2021, 9:13 AM IST