ಮುಂಬೈ:ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿ ಆಗಿದೆ. ಇದರ ಮಧ್ಯೆ ಅವರಿಗೆ ಅನೇಕ ಕ್ರಿಕೆಟ್ ದಿಗ್ಗಜರು ಮುಂದಿನ ಜೀವನಕ್ಕೆ ಶುಭಾಷಯ ಕೋರಿದ್ದಾರೆ.
ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಕೂಡ ಯುವರಾಜ್ ಸಿಂಗ್ಗೆ ವಿಶ್ ಮಾಡಿದ್ದು, ಟ್ವಿಟರ್ ಮೂಲಕ ವಿಶೇಷ ಸಂದೇಶ ರವಾನಿಸಿದ್ದಾರೆ.
ಗಂಗೂಲಿ ಟ್ವೀಟ್
ಡಿಯರ್ ಯುವಿ, ಎಲ್ಲ ಒಳ್ಳೆಯ ದಿನಗಳು ಒಂದು ದಿನ ಕೊನೆಗೊಳ್ಳಲೇಬೇಕು. ಇದು ಜಗದ ನಿಯಮ ಕೂಡ.ನೀ ನನ್ನ ಸಹೋದರ ಇದ್ದ ಹಾಗೆ. ನಿನ್ನ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ಲವ್ ಯು ಲಾಟ್ಸ್...ಅದ್ಭುತ ವೃತ್ತಿಜೀವನ ಎಂದು ಬರೆದಿದ್ದಾರೆ.
ಪ್ರತಿಕ್ರಿಯೆ ನೀಡಿರುವ ಯುವರಾಜ್ ಸಿಂಗ್
ಧನ್ಯವಾದಗಳು ದಾದ, ಟೀಂ ಇಂಡಿಯಾದಲ್ಲಿ ಆಡಲು ಅದ್ಭುತ ಅವಕಾಶ ನೀಡಿದ್ದೀರಿ. ಜತೆಗೆ ನಾನು ಕಂಡಿರುವ ಕನಸು ನನಸು ಮಾಡಿಕೊಳ್ಳಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನೀವೂ ಯಾವಾಗಲೂ ನನಗೆ ವಿಶೇಷ ವ್ಯಕ್ತಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿ ಜೀವನವನ್ನು ಸೌರವ್ ಗಂಗೂಲಿ ನಾಯಕತ್ವದಲ್ಲಿ ಆರಂಭಿಸಿದ್ದು ಗಮನಾರ್ಹ ವಿಚಾರ.