ಕರ್ನಾಟಕ

karnataka

ETV Bharat / briefs

ಇಂಗ್ಲೆಂಡ್​​​ ಟಿ-20 ಲೀಗ್​ಗೆ​ ಎಂಟ್ರಿ ಕೊಡಲಿದ್ದಾರೆ 18 ವರ್ಷದ ಭಾರತೀಯ ಆಟಗಾರ್ತಿ - ಕಿಯಾ ಸೂಪರ್​ ಲೀಗ್​

18 ವರ್ಷದ ಆರಂಭಿಕ ಆಟಗಾರ್ತಿ ಜಮೈಮಾ ಯಾರ್ಕ್​ಶೈರ್​ ಡೈಮಂಡ್ಸ್​ ತಂಡದ ಪರವಾಗಿ 2019ರ ಸೀಸನ್​ನಲ್ಲಿ ಆಡಲಿದ್ದಾರೆ. ಈಗಾಗಲೇ ಯಾರ್ಕ್​ಶೈರ್ ಆಡಳಿತ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

Rodrigues

By

Published : Jun 11, 2019, 10:33 PM IST

ಮುಂಬೈ: ಭಾರತ ಮಹಿಳಾ ತಂಡದ ಯುವ ಆಟಗಾರ್ತಿ ಜಮೈಮಾ ರೋಡ್ರಗಾಸ್​ ಕಿಯಾ ಸೂಪರ್​ ಲೀಗ್​ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

18 ವರ್ಷದ ಆರಂಭಿಕ ಆಟಗಾರ್ತಿ ಜಮೈಮಾ ಯಾರ್ಕ್​ಶೈರ್​ ಡೈಮಂಡ್ಸ್​ ತಂಡದ ಪರವಾಗಿ 2019ರ ಸೀಸನ್​ನಲ್ಲಿ ಆಡಲಿದ್ದಾರೆ. ಈಗಾಗಲೇ ಯಾರ್ಕ್​ಶೈರ್ ಆಡಳಿತ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.​

ರೋಡ್ರಿಗಾಸ್​ಗೂ ಮೊದಲೇ ಟೀಂ​ ಇಂಡಿಯಾದ ನಾಯಕಿ ಹರ್ಮನ್​ ಪ್ರೀತ್​ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕಿಯಾ ಸೂಪರ್​ ಲೀಗ್​ನ 2018ರ ಸೀಸನ್​ನಲ್ಲಿ ಆಡಿದ್ದರು. ಇದೀಗ ಭಾರತದ ಮೂರನೇ ಆಟಗಾರ್ತಿಯಾಗಿ ಜಮೈಮಾ ಪ್ರಸಿದ್ಧ ಟಿ-20 ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಮೈಮಾ ಭಾರತ ತಂಡದ ಪರ 25 ಟಿ-20 ಪಂದ್ಯಗಳನ್ನಾಡಿದ್ದು, 608 ರನ್​ ಗಳಿಸಿದ್ದಾರೆ. ಅಂಡರ್​ 19 ವಿಭಾಗದ ಪ್ರಥಮ ದರ್ಜೆ ಕ್ರಿಕೆಟ್​ನ 2017ರ ಸೀಸನ್​ನಲ್ಲಿ 112 ರ ಸ್ಟ್ರೈಕ್​ ರೇಟ್​ನಲ್ಲಿ 1013 ರನ್​ಗಳಿಸಿದ್ದರು. ಅವರ ಪ್ರದರ್ಶನ ಮಟ್ಟವನ್ನು ನೋಡಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಅಲ್ಲಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಜಮೈಮಾ ಟೀಂ ಇಂಡಿಯಾದಲ್ಲಿ ಕಾಯಂ ಸದಸ್ಯರಾಗಿ ಉಳಿದುಕೊಂಡಿದ್ದಾರೆ.

ABOUT THE AUTHOR

...view details