ಮಠ, ಎದ್ದೇಳು ಮಂಜುನಾಥ, ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವವರು ನಿರ್ದೇಶಕ ಗುರು ಪ್ರಸಾದ್. ಕೆಲವು ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದೆ, ನನಗೆ ಏನಾದರೂ ಆಗಿ ಸಾವನ್ನಪ್ಪಿದರೆ, ನನ್ನ ಸಾವಿಗೆ ರಾಜ್ಯ ಸರ್ಕಾರ ಕಾರಣ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಅವರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಫೇಸ್ಬುಕ್ನಲ್ಲಿ ಲೈವ್ ಬಂದು ಮಾತನಾಡಿರುವ ಗುರು ಪ್ರಸಾದ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಇಂದು ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಅವರು ಅವರ ಮಗನ, ವಂಶದ ಸೇವೆ ಮಾಡುತ್ತಿದ್ದಾರೆ. ಕೊರೊನಾದಿಂದ ಸಾವಿರಾರು ಜನರು ಸತ್ತಿದ್ದಾರೆ. ನಿಮಗೆ ಪಾಪ ಪ್ರಜ್ಞೆ ಇಲ್ಲವೇ? ಎಂದು ಗುರುಪ್ರಸಾದ್ ಪ್ರಶ್ನಿಸಿದ್ದಾರೆ.
ವೋಟ್ ಹಾಕಿದ ನಮಗೆ ಬೆಲೆ ಇಲ್ವಾ? ನಾವು ಮೋದಿ ಮುಖ ನೋಡಿಕೊಂಡು ವೋಟ್ ಹಾಕಿದ್ವಿ. 29 ಸಾವಿರ ಕನ್ನಡಿಗರು ಸತ್ತಿದ್ದಾರೆ. ಅದಕ್ಕೆ ಯಡಿಯೂರಪ್ಪ ಸರ್ಕಾರವೇ ಹೊಣೆ. ಅಷ್ಟು ಕನ್ನಡಿಗರನ್ನು ಸಾಯಿಸಿದ್ದೀರಲ್ಲ ನಿಮಗೆ ಪ್ರಾಯಶ್ಚಿತ್ತ ಇಲ್ಲವೇ? ಅದು ಹೇಗೆ ಊಟ ಮಾಡುತ್ತೀರಿ? ನೀವೆಲ್ಲ ಭ್ರಷ್ಟಾಚಾರಿಗಳು. ಅದನ್ನು ನಾನು ಕೋರ್ಟ್ನಲ್ಲಿ ಸಾಬೀತು ಮಾಡುತ್ತೇನೆ. ಅದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದು ಗುರುಪ್ರಸಾದ್ ಹೇಳಿದ್ದಾರೆ.