ಕರ್ನಾಟಕ

karnataka

ETV Bharat / briefs

4,499ಕ್ಕೆ ಬಂತು ಶಿಯೋಮಿ ಮೊಬೈಲ್​... ಡೇಟಾ ಖರ್ಚು ಕಡಿಮೆ ಮಾಡಲಿದೆಯಂತೆ ರೆಡ್ಮಿ ಗೋ

ರೆಡ್ಮಿ ಗೋ ಮೊಬೈಲ್​ ಮಾರ್ಚ್​ 22ರ ಮಧ್ಯಾಹ್ನ 12 ಗಂಟೆಗೆ ಶಿಯೋಮಿ ವೆಬ್​ಸೈಟ್​ ಹಾಗೂ ಎಮ್​ಐ.ಕಾಮ್​​​ ಹಾಗೂ ಫ್ಲಿಪ್​ಕಾರ್ಟ್​ನಲ್ಲಿ ಲಭ್ಯವಿರಲಿದೆ.

ರೆಡ್ಮಿ ಗೋ ಮೊಬೈಲ್

By

Published : Mar 20, 2019, 8:22 AM IST

ನವದೆಹಲಿ: ಚೀನಾ ಮೂಲದ ಷಿಯೋಮಿ ಮೊಬೈಲ್​ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಲು ಮುಂದಾಗಿದೆ.

ರೆಡ್ಮಿ ಗೋ ಹೆಸರಿನ ಮೊಬೈಲ್​ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡಲಿದೆ. ಕೇವಲ 4,499 ರೂ.ಗೆ ಈ ಮೊಬೈಲ್​ ಗ್ರಾಹಕರ ಕೈ ಸೇರಲಿದೆ.

ರೆಡ್ಮಿ ಗೋ ಮೊಬೈಲ್​ ಮಾರ್ಚ್​ 22ರ ಮಧ್ಯಾಹ್ನ 12 ಗಂಟೆಗೆ ಶಿಯೋಮಿ ವೆಬ್​ಸೈಟ್​ ಹಾಗೂ ಎಮ್​ಐ.ಕಾಮ್​​​ ಹಾಗೂ ಫ್ಲಿಪ್​ಕಾರ್ಟ್​ನಲ್ಲಿ ಲಭ್ಯವಿರಲಿದೆ.

ರೆಡ್ಮಿ ಗೋ ಗೂಗಲ್​ನ ವಿನ್ಯಾಸದ ಆಂಡ್ರಾಯ್ಡ್ ಗೋ ವರ್ಷನ್ ಹೊಂದಿರಲಿದೆ. ಆಂಡ್ರಾಯ್ಡ್​​ ಗೋನಲ್ಲಿ ಅದರದ್ದೇ ಸಾಫ್ಟ್​ವೇರ್​​​ ಇರಲಿದೆ. ಈ ಸಾಫ್ಟ್​ವೇರ್​ಗಳಿಂದ ಇಂಟರ್​ನೆಟ್​ ಕಡಿಮೆ ಖರ್ಚಾಗುತ್ತದೆ.

ರೆಡ್ಮಿ ಗೋ ವಿಶೇಷತೆಗಳು:

ಐದು ಇಂಚಿನ ರೆಡ್ಮಿ ಗೋ 720p ಹೆಚ್​​ಡಿ ಡಿಸ್ಪ್ಲೇ ಹೊಂದಿದೆ. ಸ್ನ್ಯಾಪ್​ಡ್ರಾಗನ್​​ 425 ಇರುವ ಶಿಯೋಮಿಯ ಈ ಮೊಬೈಲ್​ನಲ್ಲಿ ಒಂದು ಜಿಬಿ ರ‍್ಯಾಮ್ ಹಾಗೂ 8 ಜಿಬಿ ಅಥವಾ 16 ಜಿಬಿಯಲ್ಲಿ ಆಂತರಿಕ ಸ್ಟೋರೇಜ್​ ಹೊಂದಿದೆ.​ ಹೈಬ್ರೀಡ್​ ಸ್ಲಿಮ್ ಸ್ಲಾಟ್​ ಇದ್ದು ಎರಡು ಸಿಮ್ ಅಥವಾ ಒಂದು ಸಿಮ್ ಹಾಗೂ ಮೆಮೊರಿ ಕಾರ್ಡ್​ ಅನ್ನು ಹಾಕಬಹುದಾಗಿದೆ. 3000mah ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ABOUT THE AUTHOR

...view details