ಸುರಪುರ :ತಾಲೂಕು ಪಂಚಾಯತ್, ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ನಗರದ ತಿಮ್ಮಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಪರಿಸರ ಸಂರಕ್ಷಣೆ ಮಾಡಿದ್ರೆ, ಅದು ಮನುಷ್ಯ ಸಂಕುಲವನ್ನೆ ಉಳಿಸುತ್ತದೆ.. ಶಾಸಕ ರಾಜುಗೌಡ - Yadagiri district news
ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ಮತ್ತು ಆರೋಗ್ಯ ಇಲಾಖೆ ವತಿಯಿಂದ ಶಾಸಕ ರಾಜುಗೌಡ ನೇತೃತ್ವದಲ್ಲಿ ಸುರಪುರದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು.
![ಪರಿಸರ ಸಂರಕ್ಷಣೆ ಮಾಡಿದ್ರೆ, ಅದು ಮನುಷ್ಯ ಸಂಕುಲವನ್ನೆ ಉಳಿಸುತ್ತದೆ.. ಶಾಸಕ ರಾಜುಗೌಡ World environment day celebration](https://etvbharatimages.akamaized.net/etvbharat/prod-images/768-512-01:52-kn-surpur-02-06-world-nature-day-kac10022jpg-06062020134506-0606f-1591431306-127.jpg)
ಶಾಸಕ ನರಸಿಂಹ ನಾಯಕ ರಾಜುಗೌಡ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರೈತರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಯಿತು. ನಂತರ ನಡೆದ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೌಲಾನಸಾಬ್ ಪರಿಸರ ಬೆಳೆಸುವ ಹಾಗೂ ನಾಶ ಮಾಡುವುದಿಲ್ಲವೆಂದು ಎಲ್ಲರಿಂದ ಪ್ರತಿಜ್ಞೆ ಬೋಧಿಸಿದರು.
ಶಾಸಕ ರಾಜುಗೌಡ ಮಾತನಾಡಿ, ಎಲ್ಲರೂ ಪರಿಸರ ರಕ್ಷಣೆಯನ್ನು ಕರ್ತವ್ಯವನ್ನಾಗಿಸಿಕೊಳ್ಳಬೇಕು. ಪರಿಸರ ಬೆಳೆಸಿದರೆ ಅದು ಮನುಷ್ಯ ಸಂಕುಲವನ್ನೇ ಬೆಳೆಸಲಿದೆ ಎಂದರು. ಅಲ್ಲದೆ ಕೊರೊನಾ ಸೋಂಕು ತಡೆಯಲು ಎಲ್ಲರೂ ಮಾಸ್ಕ್ ಧರಿಸಬೇಕು. ಹೊರ ರಾಜ್ಯದಿಂದ ಬಂದು ಹೋಮ್ ಕ್ವಾರಂಟೈನ್‌ನಲ್ಲಿರುವವರ ಮೇಲೆ ಎಲ್ಲಾ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ನಿಗಾವಹಿಸಿ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.