ಲಂಡನ್: ಯಾರ್ಕರ್ ಸ್ಪೆಶಲಿಸ್ಟ್ ಲಂಕಾದ ಮಲಿಂಗಾ ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ ಹ್ಯಾಟ್ರಿಕ್ ಪಡೆದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ. ಈ ಬಾರಿಯು ಹ್ಯಾಟ್ರಿಕ್ ಪಡೆಯಲು ಪ್ರಯತ್ನಿಸುವೆ ಎಂದು ಹೇಳಿಕೊಂಡಿದ್ದಾರೆ.
ವಯಸ್ಸು 35, ಆದರೂ ಕುಗ್ಗಿಲ್ಲ ಆತ್ಮವಿಶ್ವಾಸ: 3ನೇ ಹ್ಯಾಟ್ರಿಕ್ ಪಡೆಯುವೆ ಎಂದ ಯಾರ್ಕರ್ ಕಿಂಗ್
ವಿಶ್ವಕಪ್ನಲ್ಲಿ 2 ಹ್ಯಾಟ್ರಿಕ್ ಪಡೆದಿರುವ ಏಕೈಕ ಬೌಲರ್ ಆಗಿರುವ ಶ್ರೀಲಂಕಾದ ಲಸಿತ್ ಮಲಿಂಗಾ ಮೂರನೇ ಹ್ಯಾಟ್ರಿಕ್ ಪಡೆಯಲು ಪ್ರಯತ್ನಿಸುವೆ ಎಂಬ ವಿಶ್ವಾಸದಲ್ಲಿದ್ದಾರೆ.
2019ರ ಐಪಿಎಲ್ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಮಲಿಂಗಾ 12 ಪಂದ್ಯಗಳಿಂದ 16 ವಿಕೆಟ್ ಪಡೆದು ಮುಂಬೈ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು. ಇದೇ ಪ್ರದರ್ಶನವನ್ನು ಮುಂದುವರಿಸುವ ಆತ್ಮವಿಶ್ವಾಸದಲ್ಲಿರುವ ಮಲಿಂಗಾ ಇಂಗ್ಲೆಂಡ್ನಲ್ಲಿ ನಡೆಯುವ ವಿಶ್ವಕಪ್ನಲ್ಲಿ ತಮ್ಮ ಮೂರನೇ ಹ್ಯಾಟ್ರಿಕ್ಗಾಗಿ ಪ್ರಯತ್ನಿಸುವೆ ಎಂದಿದ್ದಾರೆ. ಜೊತೆಗೆ ಯುವ ಆಟಗಾರರ ತಂಡವಾಗಿರುವ ಶ್ರೀಲಂಕಾ ಕೂಡ ವಿಶ್ವಕಪ್ ಗೆಲ್ಲುವ ನೆಚ್ಚನ ತಂಡಗಳಲ್ಲೊಂದು ಎಂದಿದ್ದಾರೆ.
2007 ವಿಶ್ವಕಪ್ನಲ್ಲಿ ಮಲಿಂಗಾ ಸತತ 4 ವಿಕೆಟ್ ಪಡೆದಿದ್ದರು. ಮಲಿಂಗಾ 45ನೇ ಓವರ್ನ ಕೊನೆಯ 2 ಎಸೆತಗಳಲಗಲಿ ಶಾನ್ ಪೊಲಾಕ್,ಆ್ಯಂಡ್ರ್ಯೂ ಹಾಲ್, ಹಾಗೂ 47 ನೇ ಓವರ್ನ ಮೊದೆಲೆರಡು ಎಸೆತಗಳಲ್ಲಿ ಜಾಕ್ ಕಾಲೀಸ್ ಹಾಗೂ ಮುಕಾಯ್ ಎಂಟಿನಿ ವಿಕೆಟ್ ಪಡೆದಿದ್ದರು. ಆದರೆ ಈ ಪಂದ್ಯವನ್ನು ದ. ಆಫ್ರಿಕಾ 1 ವಿಕೆಟ್ ರೋಚಕ ಜಯ ಸಾಧಿಸಿತ್ತು.
2011ರಲ್ಲಿ ಕೀನ್ಯಾ ವಿರುದ್ಧ ತಮ್ಮ 2ನೇ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಮಲಿಂಗಾ ಅಂದು ತಮ್ಮ 7ನೇ ಓವರ್ನ ಕೊನೆಯ ಎಸೆತದಲ್ಲಿ ತನ್ಮಯ್ ಮಿಶ್ರಾರನ್ನು 8 ಓವರ್ನ ಮೊದಲೆರಡು ಎಸೆತಗಳಲ್ಲಿ ಪೀಟರ್ ಒಂಗಾಂಡೊ ಹಾಗೂ ಶೆಮ್ ಎನ್ಗೊಚೆರ ವಿಕೆಟ್ ಪಡೆದಿದ್ದರು.