ಹೈದರಾಬಾದ್:ವಿಶ್ವಕಪ್ ಟೂರ್ನಿ ಆರಂಭಗೊಂಡು ನಾಲ್ಕು ದಿನಗಳ ಕಳೆದಿದ್ದು, ಟೀಮ್ ಇಂಡಿಯಾ ಇನ್ನಷ್ಟೇ ತನ್ನ ಅಭಿಯಾನ ಆರಂಭಿಸಬೇಕಿದೆ.
ಜೂನ್ 5 ರಂದು ವಿರಾಟ್ ಪಡೆ ಸೌತಾಂಪ್ಟನ್ನ ರೋಸ್ ಬೌಲ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸಜ್ಜಾಗಿದೆ. ಈ ನಡುವೆ ಭಾರತೀಯ ಪುರುಷರ ಹಾಗೂ ಮಹಿಳಾ ಫುಟ್ಬಾಲ್ ತಂಡದ ಆಟಗಾರರು ಟೀಮ್ ಇಂಡಿಯಾಗೆ ಶುಭ ಹಾರೈಸಿದ್ದಾರೆ.
ವಿಶ್ವಕಪ್ ಲೀಗ್ನಲ್ಲಿ ಭಾರತ, ಇಂಗ್ಲೆಂಡ್ಗೆ ಒಂದೇ ಒಂದು ಸೋಲು... ಮೆಕ್ಕಲಮ್ ಭವಿಷ್ಯ
ಪುರುಷರ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಸಂದೇಶ್ ಜಿಗನ್, ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಹಾಗೂ ಮಹಿಳಾ ತಂಡದ ದಲಿಮಾ ಚಿಬ್ಬರ್, ಅದಿತಿ ಚೌಹಾಣ್ ವಿಶೇಷ ವಿಡಿಯೋ ಮೂಲಕ ಟೀಮ್ ಇಂಡಿಯಾದ ವಿಶ್ವಕಪ್ ಅಭಿಯಾನಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ.
ಒಂದೇ ಕೈಯಲ್ಲಿ ಕ್ಯಾಚ್ ಹಿಡಿದು ಸ್ಟಾರ್ ಆದ ಫೋಟೋಗ್ರಾಫರ್!
ಜೂನ್ 5ರ ಪಂದ್ಯದ ಬಳಿಕ 9ರಂದು ಬಲಿಷ್ಠ ಆಸ್ಟ್ರೇಲಿಯಾವನ್ನು ಓವಲ್ ಮೈದಾನದಲ್ಲಿ ಎದುರಿಸಲಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಪಡೆ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ನಿರೀಕ್ಷೆ ಹೆಚ್ಚಾಗಿದೆ.