ಕರ್ನಾಟಕ

karnataka

By

Published : Jun 1, 2019, 1:12 PM IST

ETV Bharat / briefs

ವಿಶ್ವಕಪ್​ 2019: ಆಸ್ಟ್ರೇಲಿಯಾಕ್ಕೆ ಸುಲಭ ತುತ್ತಾಗುವುದೇ ಆಫ್ಘನ್​​

ಅಭ್ಯಾಸ ಪಂದ್ಯಗಳೆರಡರಲ್ಲೂ ಜಯ ಸಾಧಿಸಿರುವ ಆಸ್ಟ್ರೇಲಿಯಾ ತಂಡ ಉತ್ತಮ ಸ್ಪಿನ್ನರ್​ಗಳನ್ನೊಳ ಅಫ್ಘಾನಿಸ್ತಾನವನ್ನು ಇಂದು ಬ್ರಿಸ್ಟೋಲ್​ನಲ್ಲಿ ನಡೆಯುವ ವಿಶ್ವಕಪ್​ನ 4 ನೇ ಪಂದ್ಯದಲ್ಲಿ ಎದುರಿಸಲಿದೆ.

afg

ಬ್ರಿಸ್ಟೋಲ್​: ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡ ಇಂದು ತನ್ನ ಮೊದಲ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಅಫ್ಘಾನಿಸ್ತಾನದ ವಿರುದ್ಧ ಸೆಣಸಾಡಲಿದೆ.

ಅಭ್ಯಾಸ ಪಂದ್ಯಗಳೆರಡರಲ್ಲೂ ಜಯ ಸಾಧಿಸಿರುವ ಆಸ್ಟ್ರೇಲಿಯಾ ತಂಡ ಉತ್ತಮ ಸ್ಪಿನ್ನರ್​ಗಳನ್ನೊಳ ಅಫ್ಘಾನಿಸ್ತಾನವನ್ನು ಇಂದು ಬ್ರಿಸ್ಟೋಲ್​ನಲ್ಲಿ ನಡೆಯುವ ವಿಶ್ವಕಪ್​ನ 4 ನೇ ಪಂದ್ಯದಲ್ಲಿ ಎದುರಿಸಲಿದೆ.

5 ಬಾರಿಯ ಚಾಂಪಿಯನ್​ ಆಗಿರುವ ಆಸ್ಟ್ರೇಲಿಯಾ ತಂಡಕ್ಕೆ ಒಂದು ವರ್ಷದ ನಂತರ ಸ್ಮಿತ್​ ಹಾಗೂ ವಾರ್ನರ್​ ಆಗಮನವಾಗಿದ್ದು, ಅವರಿಗೆ ಮರುಹುಟ್ಟು ನೀಡುತ್ತಿರುವ ಈ ಪಂದ್ಯದಲ್ಲಿ ವಾರ್ನರ್​ ಫಿಂಚ್​ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲು ಕಾಯುತ್ತಿದ್ದಾರೆ. ಮತ್ತೊಬ್ಬ ಆಟಗಾರ ಸ್ಮಿತ್​ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಇಳಿಯಲಿದ್ದಾರೆ. ಉಳಿದಂತೆ ಖವಾಜಾ, ಮ್ಯಾಕ್ಸ್​ವೆಲ್​,ಕ್ಯಾರಿ, ಬೌಲಿಂಗ್ನಲ್ಲಿ ಸ್ಟೋಯ್ನಿಸ್​, ಸ್ಟಾರ್ಕ್​, ಜಂಪಾ, ಕೌಲ್ಟರ್​ ಲೈನ್ ಅಫ್ಘಾನಿಸ್ತಾನಕ್ಕೆ ಸವಾಲ್​ ನೀಡಲು ತಯಾರಾಗಿದೆ.

ಮುಖಾಮುಖಿ

ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಎರಡೂ ಬಾರಿಯೂ ಆಸ್ಟ್ರೇಲಿಯಾ ಜಯಿಸಿದೆ. ಕಳೆದ ವಿಶ್ವಕಪ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು.

ಅಫ್ಘಾನಿಸ್ತಾನ ತಂಡ

15 ಸದಸ್ಯರ ತಂಡ ಇಂತಿದೆ :

ಗುಲ್ಬದಿನ್​ ನೈಬ್(ನಾಯಕ),ಮೊಹಮ್ಮದ್​ ಶಹ್ಜಾದ್​(ವಿಕೀ), ನೂರ್​ ಅಲಿ ಜಾರ್ಡನ್​, ರಶೀದ್​ ಖಾನ್​, ಹಜರತುಲ್ಹಾ ಝಾಝೈ, ರೆಹ್ಮತ್​ ಶಾ, ಅಸ್ಘರ್​ ಆಫ್ಘಾನ್, ಹಶ್ಮತುಲ್ಹಾ ಶಾಹಿದಿ, ನಜೀಬುಲ್ಹಾ ಝಾರ್ಡನ್, ​ಸಮೀಉಲ್ಹಾ ಶಿನ್ವಾರಿ, ಮೊಹಮ್ಮದ್​ ನಬಿ, ದವ್ಲಾತ್​ ಝಾರ್ಡನ್​, ಅಫ್ಟಾಬ್​ ಆಲಂ, ಹಮೀದ್​ ಹಸ್ಸನ್​, ಮೂಜೀಬ್​ ಉರ್ ರೆಹ್ಮಾನ್.

ಆಸ್ಟ್ರೇಲಿಯಾ ತಂಡ:

ಆ್ಯರೋನ್​ ಫಿಂಚ್(ನಾಯಕ)​, ಜಾಸನ್​ ಬೆಂಡ್ರಾಫ್​, ಅಲೆಕ್ಸ್ ಕ್ಯಾರಿ(ವಿಕೆಟ್​ ಕೀಪರ್​), ಕಾಲ್ಟರ್​-ನೇಲ್​, ಪ್ಯಾಟ್​ ಕಮ್ಮಿನ್ಸ್​​, ಉಸ್ಮಾನ್​ ಖವಾಜ, ನೇಥನ್​ ಲಯನ್​, ಶಾನ್​ ಮಾರ್ಶ್​​, ಗ್ಲೇನ್​ ಮ್ಯಾಕ್ಸ್​ವೆಲ್, ರಿಚರ್ಡ್​ಸನ್, ಸ್ಟೀವ್​ ಸ್ಮಿತ್​, ಮಿಚೆಲ್​ ಸ್ಟಾರ್ಕ್​, ಮಾರ್ಕಸ್​ ಸ್ಟೋನಿಸ್, ಡೇವಿಡ್​ ವಾರ್ನರ್​, ಆ್ಯಡಮ್​ ಜಂಪಾ.

ABOUT THE AUTHOR

...view details