ಲಂಡನ್: ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 104 ರನ್ಗಳಿಂದ ಸೋಲನುಭವಿಸುವ ಮೂಲಕ ಹಿನ್ನೆಡೆ ಅನುಭವಿಸಿರುವ ಹರಿಣಗಳು, ಬಾಂಗ್ಲಾ ವಿರುದ್ಧ ಗೆದ್ದು ಮತ್ತೆ ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿದ್ದಾರೆ.
ಮೊದಲ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ಹಾಗೂ ಅನುಭವಿ ಮಿಲ್ಲರ್ರನ್ನು ಕಡೆಗಣಿಸಿದ ದ.ಆಫ್ರಿಕಾ ತಂಡಕ್ಕೆ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಕೊರತೆ ಎದ್ದು ಕಂಡಿತ್ತು. ಆರಂಭಿಕ ಆಟಗಾರ ಡಿಕಾಕ್ ಹಾಗೂ ಡಾಸ್ಸೆನ್ ಇಬ್ಬರೂ ಮಾತ್ರ ಅರ್ಧಶತಕ ಗಳಿಸಿ ಗೆಲುವಿಗಾಗಿ ಪ್ರಯತ್ನಿಸಿದರು. ಭರವೆಸೆಯ ಆಟಗಾರರಾದ ಪ್ಲೆಸಿಸ್, ಮ್ಯಾರ್ಕ್ರಮ್, ಆಮ್ಲ ವಿಫಲವಾಗಿದ್ದ ತಂಡದ ಸೋಲಿಗೆ ಕಾರಣವಾಗುತ್ತು. ಇದೀಗ ಬಾಂಗ್ಲಾ ವಿರುದ್ಧ ತಮ್ಮ ತಪ್ಪು ತಿದ್ದುಗೊಂಡು ಗೆಲುವು ಪಡೆಯುವ ಮೂಲಕ ಮುಂದಿನ ಪಂದ್ಯದಲ್ಲಿ ಬಲಿಷ್ಟ ಭಾರತವನ್ನು ಎದುರಿಸಲು ಸಜ್ಜಾಗುತ್ತಿದೆ.ಆದರೆ ಇಂದಿನ ಪಂದ್ಯದಲ್ಲೂ ಡೇಲ್ ಸ್ಟೈನ್ ಹಾಗೂ ಹಾಶಿಮ್ ಆಮ್ಲ ಇಲ್ಲದೇ ಕಣಕ್ಕಿಳಿಯಬೇಕಿದೆ. ಡೇವಿಡ್ ಮಿಲ್ಲರ್ ತಂಡಕ್ಕೆ ಆಗಮನ ಮಾಡಲಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಕಳೆದ ವರ್ಷ ಹೆಚ್ಚು ಗೆಲುವಿನ ಸರಾಸರಿ ಕಂಡುಕೊಂಡಿರುವ ನಾಲ್ಕನೇ ತಂಡವಾದ ಬಾಂಗ್ಲಾ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿದೆ. ಏಷ್ಯಾಕಪ್ ಫೈನಲ್ ಕೂಡ ತಲುಪಿ ಭಾರತದೆದುರು ಕೂದಲೆಳೆಯಂತರದಿಂದ ಸೋಲು ಕಂಡಿತ್ತು. ಇದಲ್ಲದೆ ಬಲಿಷ್ಟ ವಿಂಡೀಸ್ ಹಾಗೂ ಐರ್ಲೆಂಡ್ನೊಳಗೊಂಡ ತ್ರಿಕೋನ ಸರಣಿ ಗೆದ್ದ ಆತ್ಮವಿಶ್ವಾಸದಲ್ಲಿದೆ.
ಬಾಂಗ್ಲಾ ತಂಡಕ್ಕೆ ಆರಂಭಿಕ ತಮೀಮ್ ಇಕ್ಬಾಲ್ ಗಾಯಗೊಂಡಿರುವುದು ದೊಡ್ಡ ತಲೆನೋವಾಗಿದೆ. ಈ ಪಂದ್ಯದಲ್ಲೂ ತಮೀಮ್ ಬದಲು ಲಿಟ್ಟನ್ ದಾಸ್ ಆಡುವ ಸಾಧ್ಯತೆ ಇದೆ. ಸೌಮ್ಯ ಸರ್ಕಾರ್ ಇನ್ನಿಂಗ್ಸ್ ಆರಂಭಿಸಲಿದ್ದು, ರಹೀಮ್, ಶಕೀಬ್, ಮಹಮದ್ದುಲ್ಹಾ ಹಾಗೂ ರಹಮಾನ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.
ಮುಖಾಮುಖಿ: