ಕಾರ್ಡಿಫ್:ಉತ್ತಮ ಆರಂಭ, ಕುಸಿದ ಮಧ್ಯಮ ಕ್ರಮಾಂಕ ಕೊನೆಯಲ್ಲಿ ವರುಣನ ಕಾಟ.. ಇವೆಲ್ಲದರ ನಡುವೆ ಶ್ರೀಲಂಕಾ ತಂಡ ಆಫ್ಘಾನಿಸ್ತಾನ ವಿರುದ್ಧ 36.5 ಓವರ್ನಲ್ಲಿ 201 ರನ್ಗಳಿಗೆ ಸರ್ವಪತನವಾಗಿದೆ.
ಮಧ್ಯಮ ಕ್ರಮಾಂಕದ ವೈಫಲ್ಯ, ವರುಣನ ಕಾಟ.. ಆಫ್ಘನ್ ವಿರುದ್ಧ ಲಂಕನ್ನರ ನೀರಸ ಪ್ರದರ್ಶನ - ಅಫ್ಘಾನಿಸ್ತಾನ
ಧಿಮುತ್ ಕರುಣಾರತ್ನೆ(30) ಹಾಗೂ ಕುಸಾಲ್ ಪೆರೇರಾ(78) ರನ್ಗಳ ಮೂಲಕ ಲಂಕನ್ನರು ಉತ್ತಮ ಓಪನಿಂಗ್ ಪಡೆದಿದ್ದರು. ಇದಾದ ಬಳಿಕ ಬಂದ ದಾಂಡಿಗರು ಎರಡಂಕಿಯನ್ನೂ ಮುಟ್ಟುವಲ್ಲಿ ವಿಫಲರಾದರು.
ಧಿಮುತ್ ಕರುಣಾರತ್ನೆ(30) ಹಾಗೂ ಕುಸಾಲ್ ಪೆರೇರಾ(78) ರನ್ಗಳ ಮೂಲಕ ಲಂಕನ್ನರು ಉತ್ತಮ ಓಪನಿಂಗ್ ಪಡೆದಿದ್ದರು. ಇದಾದ ಬಳಿಕ ಬಂದ ದಾಂಡಿಗರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ದು ಲಂಕನ್ನರ ದೊಡ್ಡ ಮೊತ್ತದ ಕನಸಿಗೆ ತಣ್ಣೀರೆರಚಿತು.
ಆಫ್ಘಾನಿಸ್ತಾನದ ಪರ ಭರ್ಜರಿ ಬೌಲಿಂಗ್ ನಡೆಸಿದ ಮೊಹಮ್ಮದ್ ನಬಿ 30 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಝಡ್ರಾನ್ ಹಾಗೂ ರಶೀದ್ ಖಾನ್ ತಲಾ ಎರಡು ವಿಕೆಟ್ ಹಂಚಿಕೊಂಡರು.ಮಳೆಯಿಂದ ಅಡಚಣೆಗೊಳಗಾದ ಪಂದ್ಯವನ್ನು 41 ಓವರ್ಗೆ ಸೀಮಿತಗೊಳಿಸಲಾಗಿದೆ. ಆಫ್ಘಾನಿಸ್ತಾನಕ್ಕೆ 41 ಓವರ್ನಲ್ಲಿ 187 ರನ್ಗಳ ಗುರಿಯನ್ನು ನೀಡಲಾಗಿದೆ. ಬ್ಯಾಟಿಂಗ್ ಆರಂಭಿಸಿರುವ ಆಫ್ಘನ್ನರು ಮೂರು ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದ್ದರು.