ನಾಟಿಂಗ್ಹ್ಯಾಮ್:ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಒಂದಾದ ಇಂಗ್ಲೆಂಡ್ ಹಾಗೂ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ಇಂದು ನಾಟಿಂಗ್ಹ್ಯಾಮ್ನಲ್ಲಿ ಸೆಣಸಾಡಲಿವೆ.
ಬಲಿಷ್ಠ ಬ್ಯಾಟಿಂಗ್ ಹೊಂದಿರುವ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 104 ರನ್ಗಳಿಂದ ಮಣಿಸಿದೆ. ಜಾಸನ್ ರಾಯ್, ರೂಟ್, ಮಾರ್ಗನ್, ಬೆನ್ಸ್ಟೋಕ್ಸ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಜೋಫ್ರಾ ಆರ್ಚರ್, ವೋಕ್ಸ್ ಹಾಗೂ ರಶೀದ್ ಬೌಲಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ ಮೇಲುಗೈ ಸಾಧಿಸಲಿದೆ.
ಇನ್ನು ಮೊದಲ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಕೇವಲ 105 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ಈ ಪಂದ್ಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡು ಇಂಗ್ಲೆಂಡ್ ವಿರುದ್ಧ ಹೊಸ ಆಲೋಚನೆಗಳಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.
ಮೊದಲ ಪಂದ್ಯದಿಂದ ಹೊರಗುಳಿದಿದ್ದ ಮಲಿಕ್, ಆಸಿಪ್ ಅಲಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಯುವ ಬೌಲರ್ ಶಾಹೀನ್ ಆಫ್ರಿದಿಗೆ ಅವಕಾಶ ಸಿಗುವ ಅವಕಾಶ ಹೆಚ್ಚಿದೆ.
ಎರಡು ವಾರಗಳ ಹಿಂದಷ್ಟೇ ಮುಗಿದ ಏಕದಿನ ಸರಣಿಯಲ್ಲಿ 4-0ಯಲ್ಲಿ ಸೋಲನುಭವಿಸಿರುವ ಪಾಕಿಸ್ತಾನ ಇದೇ ಕ್ರೀಡಾಂಗಣದಲ್ಲಿ 340 ರನ್ ಗಳಿಸಿಯೂ 3 ವಿಕೆಟ್ಗಳ ಸೋಲನುಭವಿಸಿತ್ತು. ವಿಂಡೀಸ್ ವಿರುದ್ಧವೂ 105 ರನ್ಗೇ ಇದೇ ಕ್ರೀಡಾಂಗಣದಲ್ಲಿ ಆಲೌಟ್ ಕೂಡ ಆಗಿದೆ. ಹಾಗಾಗಿ ಇಂದಿನ ಪಂದ್ಯ ಕೂತೂಹಲ ಕೆರಳಿಸಿದೆ.
ವಿಶ್ವಕಪ್ನಲ್ಲಿ ಮುಖಾಮುಖಿ:
ಎರಡು ತಂಡಗಳು 9 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ತಲಾ 4ರಲ್ಲಿ ಜಯ ಸಾಧಿಸಿವೆ. ಒಂದು ಪಂದ್ಯ ರದ್ದಾಗಿದೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ 87ರಲ್ಲಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 53ರಲ್ಲಿ, ಪಾಕಿಸ್ತಾನ 31ರಲ್ಲಿ ಜಯ ಸಾಧಿಸಿವೆ.
ತಂಡಗಳು:
ಇಂಗ್ಲೆಂಡ್:ಇಯಾನ್ ಮಾರ್ಗನ್(ನಾಯಕ), ಜಾಸನ್ ರಾಯ್, ಜಾನಿ ಬೈರ್ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಲೈಮ್ ಫ್ಲಂಕೇಟ್, ಜೋಫ್ರಾ ಆರ್ಚರ್, ಆದಿಲ್ ರಶೀದ್
ಪಾಕಿಸ್ತಾನ:ಸರ್ಫರಾಜ್ ಅಹ್ಮದ್(ನಾಯಕ), ಫಾಖರ್ ಝಮಾನ್, ಅಸಿಫ್ ಅಲಿ, ಹಸನ್ ಅಲಿ, ಇಮಾಮ್ ಉಲ್ ಹಕ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಬಾಬರ್ ಅಜಂ, ಹ್ಯಾರೀಸ್ ಸೋಹೈಲ್, ಇಮಾದ್ ವಾಸಿಂ, ಮೊಹ್ಮದ್ ಆಮಿರ್, ಮೊಹಮ್ಮದ್ ಹಸ್ನೈನ್, ಶಹೀನ್ ಆಫ್ರಿದಿ, ವಹಾಬ್ ರಿಯಾಜ್