ಲಂಡನ್: ವಿಶ್ವಕಪ್ನ ಚೊಚ್ಚಲ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ವಿಕೆಟ್ ಕೀಪಿಂಗ್ ಮಾಡುವಾಗ ಬಾರತೀಯ ಸೈನಿಕರ ಬಲಿದಾನ ಲೋಗವಿರುವ ಗ್ಲೌಸ್ ಧರಿಸಿ ಸೇನೆಗೆ ಗೌರವ ತೋರಿದ್ದಾರೆ.
ಭಾರತೀಯ ಯೋಧರ 'ಬಲಿದಾನ' ಲೋಗೋವಿರುವ ಗ್ಲೌಸ್ ತೊಟ್ಟ ಧೋನಿ: ದೇಶದೆಲ್ಲೆಡೆ ಶ್ಲಾಘನೆ - ಇಂಗ್ಲೆಂಡ್
ಕ್ರಿಕೆಟ್ನಲ್ಲಿ ಹಂತ ಹಂತವಾಗಿ ಬೆಳೆದಿರುವ ಧೋನಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಕ್ರಿಕೆಟ್ನಲ್ಲಿ ಹಂತ ಹಂತವಾಗಿ ಬೆಳೆದಿರುವ ಧೋನಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದಾರೆ. ತಮ್ಮ ಕೊನೆಯ ವಿಶ್ವಕಪ್ ಆಡುತ್ತಿರುವ ಧೋನಿ ನಿನ್ನೆಯ ಪಂದ್ಯದ ವೇಳೆ ಭಾರತೀಯರ ಬಲಿದಾನವನ್ನು ಸೂಚಿಸುವ ಲೋಗೋವಿರುವ ಗ್ಲೌಸ್ ತೊಟ್ಟಿದ್ದು ಬೆಳಕಿಗೆ ಬಂದಿದ್ದು, ಧೋನಿಯ ಈ ನಡೆಗೆ ದೇಶದೆಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೊದಲಿಗೆ ಧೋನಿ ಈ ಗ್ಲೌಸ್ ತೊಟ್ಟಿರುವುದು ಯಾರಿಗೂ ತಿಳಿದಿರಲಿಲ್ಲ. ದ.ಆಫ್ರಿಕಾದ ಪೆಹ್ಲುಕ್ವಾಯೋರವರನ್ನು ಸ್ಟಂಪ್ ಔಟ್ ಮಾಡಲು ಯತ್ನಿಸಿದಾಗ ಧೋನಿ ಗ್ಲೌಸ್ನಲ್ಲಿ ಬಲಿದಾನದ ಲೋಗೋ ಕಂಡುಬಂದಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಧೋನಿಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.