ಟೌಂಟನ್: ಪಾಕಿಸ್ತಾನ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಕಡಿಮೆ ಇನ್ನಿಂಗ್ಸ್ನಲ್ಲಿ 15 ಶತಕ ಸಿಡಿಸಿದ ಪಟ್ಟಿಯಲ್ಲಿ ಶಿಖರ್ ಧವನ್ ದಾಖಲೆ ಸರಿಗಟ್ಟಿದ್ದಾರೆ.
ನಾಯಕ ಆ್ಯರನ್ ಫಿಂಚ್ ಜೊತೆ ಇನ್ನಿಂಗ್ಸ್ ಆರಂಭಿಸಿದ ವಾರ್ನರ್, 97 ಎಸೆತಗಳಲ್ಲಿ ತಮ್ಮ 15ನೇ ಶತಕ ಪೂರ್ಣಗೊಳಿಸಿದರು. ಇವರ ಇನ್ನಿಂಗ್ಸ್ನಲ್ಲಿ 11 ಬೌಂಡರಿ ಒಂದು ಸಿಕ್ಸರ್ ಒಳಗೊಂಡಿತ್ತು. ಮತ್ತೊಬ್ಬ ಆರಂಭಿಕ ಆಟಗಾರ ಆ್ಯರನ್ ಫಿಂಚ್ 84 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 82 ರನ್ ಗಳಿಸಿದರು.
ಕಡಿಮೆ ಇನ್ನಿಂಗ್ಸ್ನಲ್ಲಿ 15 ಶತಕ ಸಿಡಿಸಿದವರು:
ಹಾಶಿಮ್ ಆಮ್ಲ 86 ಇನ್ನಿಂಗ್ಸ್
ವಿರಾಟ್ ಕೊಹ್ಲಿ 106 ಇನ್ನಿಂಗ್ಸ್
ಶಿಖರ್ ಧವನ್/ ಡೇವಿಡ್ ವಾರ್ನರ್ 108 ಇನ್ನಿಂಗ್ಸ್
ಜೋ ರೂಟ್ 126 ಇನ್ನಿಂಗ್ಸ್
ಸಯೀದ್ ಅನ್ವರ್ 143 ಇನ್ನಿಂಗ್ಸ್
ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್ ಶತಕ:
ಡೇವಿಡ್ ವಾರ್ನರ್ ಟೌಂಟನ್ನಲ್ಲಿ ಶತಕ ಸಿಡಿಸುವ ಮೂಲಕ ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್ ಶತಕ ಬಾರಿಸಿದ ಶ್ರೇಯಕ್ಕೆ ಪಾತ್ರರಾದರು. 2017 ರಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಸಿಡ್ನಿಯಲ್ಲಿ 130 ಹಾಗೂ ಅಡಿಲೇಡ್ನಲ್ಲಿ 179ರನ್ಗಳಿಸಿದ ವಾರ್ನರ್, ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿ ಗಮನ ಸೆಳೆದಿದ್ದರು.