ಹೈದರಾಬಾದ್:ಜಂಟಲ್ಮನ್ಸ್ ಗೇಮ್ ಎಂದೇ ಕರೆಸಿಕೊಳ್ಳುವ ಕ್ರಿಕೆಟ್ನ ಮಹತ್ತರ ಟೂರ್ನಿ ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದರ ಜೊತೆಯಲ್ಲೇ ಕ್ರಿಕೆಟ್ ಪ್ರೇಮಿಗಳ ಲೆಕ್ಕಾಚಾರವೂ ಭರ್ಜರಿಯಾಗಿಯೇ ನಡೆಯುತ್ತಿದೆ.
ಈ ಬಾರಿ ವಿಶ್ವಕಪ್ ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಆಯೋಜನೆಯಾಗಿದ್ದು ವೇಗಿಗಳು ಹೆಚ್ಚಿನ ಪ್ರಮಾಣದಲ್ಲಿ ಪಾರುಪತ್ಯ ಮೆರೆಯುವ ಸಾಧ್ಯತೆ ನಿಚ್ಚಳವಾಗಿದೆ. ಮೇ.30ರಿಂದ ಆರಂಭವಾಗುವ ವಿಶ್ವಕಪ್ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ಪ್ರಮುಖ ವೇಗಿಗಳ ಮೇಲೊಂದು ಒಳನೋಟ ಇಲ್ಲಿದೆ.
ಜಸ್ಪ್ರೀತ್ ಬೂಮ್ರಾ: ಭಾರತ
2019ರ ವಿಶ್ವಕಪ್ ಟೀಮ್ ಇಂಡಿಯಾದ ವೇಗದ ಬಲ ಎಂದೇ ಬಿಂಬಿತವಾಗಿರುವ ಬೂಮ್ರಾ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿಯೇ ಇದೆ.
2016ರಲ್ಲಿ ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟ ಬೂಮ್ರಾ, ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದ ವೇಗದ ಬೌಲಿಂಗ್ ಶಕ್ತಿಯಾಗಿದ್ದಾರೆ. ಈ ಆವೃತ್ತಿಯ ಐಪಿಎಲ್ನಲ್ಲಿ ಮುಂಬೈ ಗೆಲುವಿನಲ್ಲಿ ಬೂಮ್ರಾ ಪಾತ್ರ ಬಹಳ ದೊಡ್ಡದಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಬೂಮ್ರಾ ಪ್ರದರ್ಶನ ಮುಂಬೈ ತಂಡಕ್ಕೆ ಮತ್ತೊಂದು ಕಪ್ ಗೆಲ್ಲಲು ಸಹಾಯಕವಾಗಿತ್ತು.
ಯಾರ್ಕರ್, ಡೆತ್ ಓವರ್ ಬೌಲಿಂಗ್ ಹಾಗೂ ಸ್ವಿಂಗ್ ಬೌಲಿಂಗ್ ಬೂಮ್ರಾ ಅಸ್ತ್ರವಾಗಿದೆ. ಐಪಿಎಲ್ ಪ್ರದರ್ಶನ, ವಿಶ್ವಕಪ್ನಲ್ಲಿ ಬೂಮ್ರಾ ಪಾಲಿಗೆ ಸಹಾಯಕ್ಕೆ ಬರಲಿದೆ.
ಶಾಹಿನ್ ಅಫ್ರಿದಿ: ಪಾಕಿಸ್ತಾನ
ವಾಸಿಂ ಅಕ್ರಂ, ವಕಾರ್ ಯೂನಿಸ್ ಹಾಗೂ ಶೋಯಬ್ ಅಖ್ತರ್ಗಳಂತ ದಿಗ್ಗಜ ಬೌಲರ್ಗಳಿದ್ದ ಪಾಕ್ ತಂಡದಲ್ಲಿ ಶಾಹಿನ್ ಅಫ್ರಿದಿ ಎನ್ನುವ ಯುವ ಬೌಲರ್ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.
ಕಳೆದ ವರ್ಷ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಶಾಹಿನ್ ಅಫ್ರಿದಿ 10 ಏಕದಿನ ಪಂದ್ಯದಲ್ಲಿ 19 ವಿಕೆಟ್ ಕಿತ್ತಿದ್ದಾರೆ. 38 ರನ್ನಿಗೆ 4 ವಿಕೆಟ್ ಉತ್ತಮ ಸಾಧನೆಯಾಗಿದೆ.
ಓಶಾನೆ ಥೋಮಸ್: ವೆಸ್ಟ್ ಇಂಡೀಸ್